ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಯೋಜಿಸಿದ್ದ ಔತಣ ಕೂಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿರಲಿಲ್ಲ. ಈ ವಿಷಯವಾಗಿ ಮಾತನಾಡಿದ ಅವರು, ಅವರ ಔತಣಕೂಟಕ್ಕೆ ನಾನು ಹಾಗೂ ರಮೇಶ ಹೋಗಲ್ಲ. ಇಲ್ಲಿ ಊಟಕ್ಕೆ ಕರೆಯುತ್ತಾರೆ. ದಾವಣಗೆರೆಯಲ್ಲಿ ಚೇಲಾಗಳನ್ನು ಬಿಡುತ್ತಾರೆ. ಚೇಲಾಗಳ ಸಭೆಯಲ್ಲಿ ಯತ್ನಾಳ್ ಉಚ್ಛಾಟನೆ ಮಾಡಿ ಎಂದ ಬಗ್ಗೆ ಮಾಹಿತಿ ಸಿಕ್ಕಿದೆ.
ಯಡಿಯೂರಪ್ಪ ಮನೆಯಲ್ಲೇ ಭಿನ್ನಮತೀಯರ ಸಭೆ ಆಗಿರುವುದು ಗೊತ್ತು. ಆದರೆ, ಈಗ ಊಟಕ್ಕೆ ಕರೆಯುತ್ತಾರೆ. ಅಲ್ಲಿ ಸಭೆ, ಇಲ್ಲಿ ಊಟ. ಬೆನ್ನಿಗೆ ಚಾಕು ಹಾಕುವುದು ಯಡಿಯೂರಪ್ಪ ಮಾತ್ರ. ಅವರೊಬ್ಬರೇ ಬಿಜೆಪಿ ಕಟ್ಟಿಲ್ಲ.
ನಾವು ಅವರೊಂದಿಗೆ ಸುಮಾರು 40 ವರ್ಷಗಳಿಂದ ಇದ್ದೇವೆ. ಯಡಿಯೂರಪ್ಪಗೆ ನಾವೇ ದುಡ್ಡು, ಪೆಟ್ರೋಲ್ ಹಾಕಿ, ಬಸ್ ಟಿಕೆಟ್ ಕೊಟ್ಟು ಕಳುಹಿಸಿದ್ದೇವೆ. ಆದರೆ, ಈಗ ಅವರೊಬ್ಬರೇ ಸೈಕಲ್ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ,.