ದಾವಣಗೆರೆ: ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ,(MP Renukacharya) ಮತ್ತೊಮ್ಮೆ ಬಸನಗೌಡ ಪಾಟೀಲ್ ಯತ್ನಾಳ್(Basanagowda Patil Yatnal) ವಿರುದ್ಧ ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಯತ್ನಾಳ್ ದು ಕೆಲಸಕ್ಕೆ ಬಾರದ ಮೂರು ಮತ್ತೊಂದು ಟೀಂ ಅಷ್ಟೆ. ಅವರೆಲ್ಲ ಕಾಂಗ್ರೆಸ್ ಏಜೆಂಟ್ ರು. ಯಡಿಯೂರಪ್ಪ ಅವರ ಕಾಲು ಹಿಡಿದು ಯತ್ನಾಳ್ ಬಿಜೆಪಿಗೆ (BJP)ಸೇರಿದ್ದರು. ಇವರಿಗೆಲ್ಲ ಯಡಿಯೂರಪ್ಪ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ಹಿಂದೂ ಹುಲಿಯಂತೆ ಟಿಪ್ಪು ಡ್ರೆಸ್ ಹಾಕಿ ಇಪ್ತಿಯಾರ್ ಕೂಟ ಆಯೋಜಿಸಿದವರು ಇವರು. ನನ್ನ ಬಗ್ಗೆ ಮಾತನಾಡ್ತೀಯಾ? ನೀನು 420 ನಮಕರಾಮ್ ಎಂದು ಯತ್ನಾಳ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ನೀನು ಒಂದು ಹೆಜ್ಜೆ ಮುಂದಿಟ್ಟರೆ ನಾನು 10 ಹೆಜ್ಜೆ ಮುಂದಿಡ್ತೀನಿ, ಉತ್ತರ ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಲಿಂಗಾಯತ 102 ಒಳಪಂಗಡಗಳಿಗೆ ಯಡಿಯೂರಪ್ಪ ಅವರು ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸಿದರು. ಆಗ ನೀನೆಲ್ಲಿದ್ದೆ? ನೀನು ಪಂಚಮಸಾಲಿ(panchamasali) ಹೋರಾಟ ಮಾಡಿದ್ರೆ ಮೀಸಲಾತಿ ಕೇಳಿಲ್ಲ. ಇದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿಗೆ ಯಾವ ನೈತಿಕತೆಯೂ ಇಲ್ಲ. ಯತ್ನಾಳ್ ಬೇರೆಯವರ ಹೆಗಲ ಮೇಲೆ ಗುಂಡಿಟ್ಟು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.