ವಿಜಯಪುರ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿಯಿಂದ (BJP) ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಗಮಿಸಿದ್ದಾರೆ.
ಉಚ್ಛಾಟನೆಯಾದ ನಂತರ ಅವರು ಬೆಂಗಳೂರಿನಲ್ಲಿ ರೆಬೆಲ್ ನಾಯಕರೊಂದಿಗೆ ಹಲವಾರು ಸಭೆ ನಡೆಸಿದ್ದರು. ನಂತರ ಬೆಂಗಳೂರಿನಿಂದ (Bengaluru) ತಡರಾತ್ರಿ ಪ್ರಯಾಣ ಬೆಳೆಸಿ ವಿಜಯಪುರಕ್ಕೆ ಆಗಮಿಸಿದ್ದರು. ವಿಜಯಪುರದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ಯತ್ನಾಳ್ ಹಾಗೂ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪತ್ನಿ ಶೈಲಜಾ ಹಾಗೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದಾರೆ.
ಪೂಜೆ ಬಳಿಕ ಮಂಗಳಾರತಿ ಕಾರ್ಯಕ್ರಮ ಮುಗಿಸಿ, ಹೋಮ ಹವನ ಪೂಜೆ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ, ಅವರು ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಿಸಿರುವ ದಾಸೋಹ ನಿಲಯ ಹಾಗೂ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.