ಬೆಂಗಳೂರು: ಶಾಸಕ ರಿಜ್ವಾನ್ ಅರ್ಷದ್, ಯತ್ನಾಳ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸದನದಲ್ಲಿ ಯತ್ನಾಳ್ ಗೆ ದೇಶದ್ರೋಹಿ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಲ್ಪಸಂಖ್ಯಾತರಿಗೆ ನೀಡಿದ ಅನುದಾನದ ಬಗ್ಗೆ ಹೇಳುತ್ತಾ, ಮದರಸಾಗಳಲ್ಲಿ ಧಾರ್ಮಿಕ ವಿಷಯವನ್ನಲ್ಲದೆ ದೇಶವಿರೋಧಿ ಚಟುವಟಿಕೆ ಕುರಿತು ಹೇಳುತ್ತಿದ್ದಾರೆ ಎಂದಾಗ ಸದನದಲ್ಲಿ ದೊಡ್ಡ ಕೋಲಾಹಲವೇ ಎದ್ದಿತು. ಈ ವೇಳೆ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಎದ್ದು ನಿಂತು, ಏನು ಮಾತಾಡ್ತಾ ಇದ್ದೀರ ಸ್ವಾಮಿ ನೀವು? ಸದನದ ಹಿರಿಯರಲ್ಲಿ ಒಬ್ಬರಾಗಿರುವ ನೀವು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದೀರಿ. ನೀವು ದ್ರೋಹಿಗಳು ಎಂದು ಗುಡುಗಿದ್ದಾರೆ. ಈ ವೇಳೆ ವಾಕ್ಸಮರ ನಡೆಯಿತು.