ಹುಬ್ಬಳ್ಳಿ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ. ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀನು ರಾಜೀನಾಮೆ ನೀಡಿ ಬಾ. ನಾನು ಕೇವಲ ಹಿಂದೂತ್ವದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನನಗೆ ಮುಸ್ಲಿಂರ ವೋಟ್ ಬೇಡ. ವಿಜಯೇಂದ್ರ ನಿನಗೆ ತಾಕತ್ ಇದ್ದರೆ, ಚುನಾವಣೆಗೆ ರೆಡಿಯಿದ್ದೇನೆ. ಹಂದಿ ಕಡೆಯಿಂದ ನನ್ನ ವಿರುದ್ಧ ಮಾತನಾಡಿಸಬೇಡ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ಬಸನಗೌಡ ಪಾಟೀಲ್ ಯತ್ನಾಳ್ ಹಂದಿ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯು ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಹೊಂದಿದ ಮೇಲೆ ನಾನು ಬಿಜೆಪಿ ಸೇರುತ್ತೇನೆ. ಒಳ್ಳೆಯವರಿಗೆ ನಾನು ಒಳ್ಳೆಯವನು. ದುಷ್ಟರಿಗೆ ನಾನು ದುಷ್ಟ ಎಂದು ಗುಡುಗಿದ್ದಾರೆ.