ನವದೆಹಲಿ: ಕೇಂದ್ರದ ಸಂಸದೀಯ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಕಿರಣ್ ರಿಜುಜುರನ್ನು ರೆಬೆಲ್ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಕರ್ನಾಟಕದಲ್ಲಿ ನಡೆಯುತ್ತಿರುವ ವಕ್ಫ್ ಭೂಕಬಳಿಕೆಯ ಕರಾಳತೆಯನ್ನು ಹಾಗೂ ಇದರಿಂದ ರೈತರು, ಮಠ-ಮಂದಿರಗಳು, ಸಾಮಾನ್ಯ ಜನತೆ ಅನುಭವಿಸುತ್ತಿರುವ ಜಮೀನು, ಮನೆ ಜಾಗಗಳನ್ನು ಕಳೆದುಕೊಳ್ಳುವ ಭೀತಿಯನ್ನು ಉದಾಹರಣೆಗಳ ಸಮೇತ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಭಗವಂತ ನಾಯಕ್, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್, ಭರತ್ ಮಗದೂರು, ರವಿ ಬಿರಾದರ್, ನಿರಂತರ ಗಣೇಶ್, ರೇಣುಕಾ ಪ್ರಸಾದ್, ಪ್ರದೀಪ್, ಅರುಣ ಸೇರಿದಂತೆ ಹಲವರು ಇದ್ದರು.