ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅಂಡ್ ಟೀಂ ಹರಸಾಹಸ ಪಡುತ್ತಿದೆ. ಸದ್ಯ
ದೆಹಲಿಯಲ್ಲಿಯೇ ಬೀಡುಬಿಟ್ಟಿರುವ ಯತ್ನಾಳ್ ಅಂಡ್ ಟೀಂ, ತಮ್ಮ ತಂಡದಲ್ಲಿ ಐವರ ಹೆಸರನ್ನು ಅಂತಿಮ ಮಾಡಿಕೊಂಡು, ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಸ್ತಾಪ ಮಾಡಲು ಸಿದ್ಧತೆ ನಡೆಸಿದ್ದಾರೆ.
ಹಾಗಾದರೆ, ರಾಜ್ಯಾಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಿಕೊಂಡಿರುವ ಆ ಐವರು ನಾಯಕರಾದರೂ ಯಾರು ಯಾರು? ಅನ್ನುವುದನ್ನು ನೋಡುವುದಾದರೆ,
- ಬಸನಗೌಡ ಪಾಟೀಲ್ ಯತ್ನಾಳ್. – ಶಾಸಕರು. ವಿಜಯಪುರ ನಗರ ಕ್ಷೇತ್ರ. (ವೀರಶೈವ-ಲಿಂಗಾಯತ. ಪಂಚಮಸಾಲಿ)
- ಬಸವರಾಜ ಬೊಮ್ಮಾಯಿ. – ಸಂಸದರು. ಹಾವೇರಿ-ಗದಗ ಲೋಕಸಭಾ ಕ್ಷೇತ್ರ. ಮಾಜಿ ಮುಖ್ಯಮಂತ್ರಿಗಳು.(ವೀರಶೈವ-ಲಿಂಗಾಯತ. ಸಾದರ)
- ವಿ.ಸೋಮಣ್ಣ – ಕೇಂದ್ರ ಸಚಿವರು. ತುಮಕೂರು ಲೋಕಸಭಾ ಕ್ಷೇತ್ರ. (ವೀರಶೈವ-ಲಿಂಗಾಯತ. ನೊಣಬ).
- ಅರವಿಂದ ಬೆಲ್ಲದ್ – ಶಾಸಕರು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರ. (ವೀರಶೈವ-ಲಿಂಗಾಯತ. ಪಂಚಮಸಾಲಿ).
- ಕೋಟಾ ಶ್ರೀನಿವಾಸಪೂಜಾರಿ. – ಸಂಸದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. (ಈಡಿಗ).
ಹೀಗೆ ಐವರು ನಾಯಕರ ಹೆಸರನ್ನು ಅಂತಿಮ ಮಾಡಿಕೊಂಡು ಹೈಕಮಾಂಡ್ ನಾಯಕರ ಮುಂದೆ ಪ್ರಸ್ತಾವನೆಗೆ ಯತ್ನಾಳ್ ಅಂಡ್ ಟೀಂ ಸಿದ್ಧರಾಗಿದ್ದಾರೆ.