ಬೆಂಗಳೂರು : ಕನ್ನಡದ ರಾಕಿಂಗ್ ಸ್ಟಾರ್ ಯಶ್ ಭಾರತದ ಅತಿ ದೊಡ್ಡ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ತನ್ನ ಮಗನಂತೆ ತಾನು ಹೆಸರು ಮಾಡಬೇಕು ಎಂದು ಯಶ್ ತಾಯಿ ಪುಷ್ಪ ಕೂಡ ʼಕೊತ್ತಲವಾಡಿʼ ಸಿನಿಮಾ ನಿರ್ಮಾಣ ಮಾಡುವುದರ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ, ಅದರೆ ಪುಷ್ಪ ನಿರ್ಮಾಣದ ʼಕೊತ್ತಲವಾಡಿʼ ನಿರೀಕ್ಷಿತ ಗೆಲುವು ಕಾಣಲಿಲ್ಲ.
ಇದಾದ ಬಳಿಕ ಕರಾವಳಿ ಕ್ವೀನ್ ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಸಿನಿಮಾವನ್ನು ಪುಷ್ಪಾ ಅವರು ಕರ್ನಾಟಕದಲ್ಲಿ ವಿತರಿಸಿದ್ದರು. ಆದರೆ, ಗಳಿಕೆಯಲ್ಲಿ ಪುಷ್ಪಾ ಅವರ ವಿತರಣೆಯ ‘ಘಾಟಿ’ ಕುಸಿತಗೊಂಡಿದೆ.
3 ದಿನಗಳ ಗಳಿಕೆಯಲ್ಲಿ ಭಾರೀ ಇಳಿಮುಖವಾಗಿದೆ. ಮೊದಲ ದಿನದ ಕಲೆಕ್ಷನ್ 2 ಕೋಟಿ ದಾಟಿಲ್ಲ. ನೆಗೆಟಿವ್ ವಿಮರ್ಶೆ ಹಾಗೂ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗದ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗೆ ಒಳ್ಳೆಉ ಓಪನಿಂಗ್ ಸಿಕ್ಕಿಲ್ಲ. ಕನ್ನಡದ ಏಳುಮಲೆ, ತಮಿಳಿನ ಮದರಾಸಿ, ಹಿಂದಿಯ ಭಾಘಿ ಸಿನೆಮಾಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಏಕ ಪರದೆಗಳಲ್ಲೂ ‘ಘಾಟಿ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಾಂಜಾ ಕಥೆಯನ್ನ ಕರ್ನಾಟಕ ಪ್ರೇಕ್ಷಕರು ಕೈ ಬಿಟ್ಟಿದ್ದಾರೆ.