ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದೆ. ಹೀಗಿರುವಾಗ ಯಶ್ ಅಭಿಮಾನಿ ಬಳಗದಿಂದ ರಾಕಿಂಗ್ ಸ್ಟಾರ್ ಜನ್ಮ ದಿನದ ಅಂಗವಾಗಿ ಅನೇಕ ಕಡೆ ಬ್ಯಾನರ್‌ಗಳನ್ನು, ಕಟೌಟ್‌ಗಳನ್ನು ಹಾಕಲಾಗಿದೆ. ಜೊತೆಗೆ ಯಶ್ ಅವರ ಸ್ನೇಹಿತರು ರಾಜ್ಯದ ಹಲವು ಕಡೆಗಳಲ್ಲಿ ಬಿಲ್ಬೋರ್ಡ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದೀಗ ನಮ್ಮ ಮೆಟ್ರೋ ಪೂರ್ತಿ ಯಶ್ ಬ್ಯಾನರ್ ಹಾಕಿ ಹುಟ್ಟುಹಬ್ಬವನ್ನು ಸಂಭ್ರಮಿಸಲು ತಯಾರಾಗಿದ್ದಾರೆ.
ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲು..
ಜನವರಿ 8ರಂದು ರಾಕಿ ಭಾಯ್ 40ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಗೆಳೆಯರಿಂದ ಅಚ್ಚರಿ ಉಡುಗೊರೆ ನೀಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಮೆಟ್ರೋ ಮೇಲೆ ಗೆಳೆಯ ರಾಕಿಭಾಯ್ ಅನ್ನು ರಾರಾಜಿಸಿದ್ದಾರೆ. ಇದು ಬೆಂಗಳೂರು ಮೆಟ್ರೋ ಇತಿಹಾಸದಲ್ಲಿಯೇ ಮೊದಲು. ಈಗಾಗಲೇ ರಾಕಿ ಭಾಯ್ ಪೋಸ್ಟರ್ ಅನ್ನು ಹೊತ್ತ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಿದೆ.

ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರೆಲ್ಲ ಸೇರಿಕೊಂಡು ಬೆಂಗಳೂರಿನ ನೇರಳೆ ಬಣ್ಣ ಅಂದರೆ, ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್ ಮಾರ್ಗದ ಬೋಗಿಗಳ ಮೇಲೆ ಬೃಹತ್ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ಆಪ್ತರು ನೀಡಿರುವ ಮಾಹಿತಿ ಪ್ರಕಾರ ಈ ಪೋಸ್ಟರ್‌ಗಾಗಿ ಅವರ ಸ್ನೇಹಿತರು ಸುಮಾರು ₹10 ರಿಂದ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.
ಸದ್ಯ ಯಶ್ ‘ಟಾಕ್ಸಿಕ್’ ಕಡೆಗೆ ಫೋಕಸ್ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾ ಪ್ರಚಾರವನ್ನು ಅಧಿಕೃತವಾಗಿ ಆರಂಭ ಮಾಡಿದ್ದಾರೆ. ತಮ್ಮ ಬರ್ತ್‌ಡೇ ಸಂಭ್ರಮದಿಂದಲೇ ‘ಟಾಕ್ಸಿಕ್’ ಪ್ರಮೋಷನ್ ಶುರುವಾಗಿದೆ. ಈಗಾಗಲೇ ಸಿನಿಮಾದಲ್ಲಿರುವ ನಾಯಕಿಯರ ಫಸ್ಟ್ ಲುಕ್ ರಿಲೀಸ್ ಮಾಡಿ ಕಿಕ್ ಕೊಟ್ಟಿರುವ ಟೀಮ್, ಯಶ್ ಬರ್ತ್‌ಡೇ ದಿನ ಏನು ಸರ್ಪ್ರೈಸ್ ಕೊಡಬಹುದೆಂದು ಎದುರು ನೋಡುತ್ತಿದ್ದಾರೆ. ಅದಕ್ಕೂ ಮೊದಲು ಮೆಟ್ರೋ ರೈಲಿನ ಮೇಲೆ ಯಶ್ ಪೋಸ್ಟರ್ ರಾರಾಜಿಸುತ್ತಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ : ಸೈಟುಗಳ ಸೆಟ್‌ಬ್ಯಾಕ್ ಇಳಿಕೆ ಮಾಡಿ GBA ಅಂತಿಮ ಆದೇಶ | ಹೊಸ ಪಟ್ಟಿಯಂತೆ ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು?



















