ಬೆಂಗಳೂರು: ಸಿನಿಮಾದಲ್ಲಿ ಒಮ್ಮೆ ಅದೃಷ್ಟದ ಬಾಗಿಲು ತೆಗೆದ್ರೆ ಅದು ಒಮ್ಮೊಮ್ಮೆ ಹಾಗೇ ಉಳಿದುಬಿಡುತ್ತೆ..! ಒಬ್ಬ ನ್ಯಾಚುರಲ್ ಸುಂದ್ರಿಗೂ ಈಗ ಈ ಮಾತು ಅನ್ವಯವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಗೆ ಜೋಡಿಯಾಗ್ತಿರೋ ಈ ಬ್ಯೂಟಿಯ ಕುರಿತ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

ನ್ಯಾಷನಲ್ ಐಕಾನ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಚಿತ್ರದ ತಪಸ್ಸಿನಲ್ಲಿದ್ದಾರೆ. ಯಶ್ ಕೆಜಿಎಫ್-2 ಆದಮೇಲೆ ಯಾವ ಸಿನಿಮಾಗೂ ಯಾಕೆ ಸೈನ್ ಮಾಡಿಲ್ಲ ಅನ್ನೋದಕ್ಕೆ ‘ಟಾಕ್ಸಿಕ್’ ತಕ್ಕ ಉತ್ತರ ಕೊಡುತ್ತಂತೆ. ಕರ್ನಾಟಕ ಮಾತ್ರವಲ್ಲ, ಭಾರತ ಮಾತ್ರವಲ್ಲ, ಇಡೀ ವಿಶ್ವ ಸಿನಿಮಾರಂಗವನ್ನೇ ಬೆರಗುಗೊಳಿಸುವ ಪ್ರಯತ್ನ ಯಶ್ ಮಾಡೇಮಾಡ್ತಾರೆ ಅನ್ನೋ ಭರವಸೆ ರಾಕಿ ಬಳಗಕ್ಕಿದೆ. ಇದರ ಮಧ್ಯೆ ಯಶ್ ಗೆ ನಾಯಕಿಯಾಗೋದು ಸಪ್ತಸಾಗರದಾಚೆ ಬೆಡಗಿ ರುಕ್ಮಿಣಿವಸಂತ್ ಅನ್ನೋದು ಬಹುತೇಕ ಫಿಕ್ಸ್ ಆಗಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ಆಕ್ಟಿಂಗ್ ಗೆ ಎಲ್ಲರೂ ಫಿದಾ ಆಗಿದ್ದರು. ಆ ನಂತರ ಕಾಂತಾರ-1ಕ್ಕೂ ಇವರೇ ನಾಯಕಿ ಅಂತ ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ. ಈಗ ರುಕ್ಮಿಣಿ ಮತ್ತೊಂದು ಸಿನಿಮಾಯಾಗದ ಭಾಗವಾಗ್ತಿದಾರೆ. ಯಶ್ ಜೊತೆಗೆ ರೋಮ್ಯಾನ್ಸ್ ಮಾಡೋ ಚಾನ್ಸ್ ರುಕ್ಮಿಣಿ ಬ್ಯಾಗ್ ಗೆ ಬಿದ್ದಿದೆ.

‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣಕ್ಕಾಗಿಯೇ ರುಕ್ಮಿಣಿ ಮುಂಬೈಗೆ ಹಾರಿದ್ರು ಎಂಬ ಮಾಹಿತಿ ಸಿಕ್ಕಿದೆ. ಯಶ್-ರುಕ್ಮಿಣಿ ಕಾಂಬಿನೇಶನ್ ಹೇಗಿರುತ್ತೆ ಎಂಬ ಕುತೂಹಲಕ್ಕೆ ಅಧಿಕೃತವಾಗಿ ಇನ್ನೂ ಯಾವ ಘೋಷಣೆಯೂ ಆಗಿಲ್ಲ. ರುಕ್ಮಿಣಿ ವಸಂತ್ ನಮ್ಮ ಕನ್ನಡದ ಹುಡುಗಿ. ಟಾಕ್ಸಿಕ್ ಚಿತ್ರದಲ್ಲಿ ಮೊದಲು ಬಾಲಿವುಡ್ ನಾಯಕಿಯರೇ ತುಂಬಿ ಹೋಗಿರುತ್ತಾರೆ ಎಂಬ ಮಾತಿತ್ತು. ಆದರೆ ಈಗ ರುಕ್ಮಿಣಿ ನಾಯಕಿಯಾಗಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಈಗಾಗಲೇ ಕಾಂತಾರ-1ರಲ್ಲಿ ಬ್ಯುಸಿಯಾಗಿರೋ ರುಕ್ಮಿಣಿಗೆ 2025-26 ಎರಡೂ ವರ್ಷಗಳು ಒಳ್ಳೆ ಜಾಕ್ ಪಾಟ್ ಎನ್ನಬಹುದು.



















