ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ತಾರಾಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್‌ಗೆ ಇಂದು 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಬೆಳ್ಳಂಬೆಳಗ್ಗೆ ಟಾಕ್ಸಿಕ್ ಚಿತ್ರದ ಕುರಿತು ಮಹಾ ಅಪ್‌ಡೇಟ್ ಕೊಟ್ಟಿದ್ದ ಯಶ್ ತಮ್ಮ ಸ್ಪೆಷಲ್ ದಿನವನ್ನ ಜೀವನ ಸಂಗಾತಿ ಜೊತೆಗೆ ಕಳೆಯುತ್ತಿದ್ದಾರೆ.
ಇನ್ನು ತಮ್ಮ ಜೀವನದ ಭಾಗವಾಗಿರುವ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಯಶ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ವಿಭಿನ್ನ ಫೋಟೋ ಜೋಡಣೆಯ ವಿಡಿಯೋ ಹಂಚಿಕೊಂಡು ಮದುವೆ ಆನಿವರ್ಸರಿಯ ಶುಭಾಶಯ ಕೋರಿದ್ದಾರೆ.
ರಾಧಿಕಾ ಕ್ಯೂಟ್ ವಿಡಿಯೋ ಪೋಸ್ಟ್!
ಯಶ್ ನನ್ನ ಪರ್ಸನಲ್ ಬಾಡಿಗಾರ್ಡ್, ನನ್ನ ಚಾಟ್ ಜಿಪಿಟಿ, ನನ್ನ ಚೆಫ್, ನನ್ನ ಪರ್ಸನಲ್ ಫೋಟೋಗ್ರಾಫರ್, ನನ್ನ ಮೆಂಟರ್, ನನ್ನ ಡಿಜೆ, ನನ್ನ ಪರ್ಸನಲ್ ಡಾಕ್ಟರ್, ನನ್ನ ಕ್ಯಾಲ್‌ಕುಲೇಟರ್, ನನ್ನ ಸ್ಟ್ರೆಸ್ ಬಸ್ಟರ್, ನನ್ನ ಶಾಂತಿ, ಎಲ್ಲದಕ್ಕೂ ನೀವು ನನ್ನ ಉತ್ತರವಾಗಿದ್ದೀರಿ ಎಂದು ಯಶ್ ಬಗ್ಗೆ AI ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾಧಿಕಾ 9ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ.
ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ
ಯಶ್ 2004ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಉತ್ತರಾಯಣ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2005ರಲ್ಲಿ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.
ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ, 2008ರಲ್ಲಿ ರೊಮ್ಯಾಂಟಿಕ್ ಡ್ರಾಮಾ ‘ಮೊಗ್ಗಿನ ಮನಸು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
ಯಶ್ ಮತ್ತು ರಾಧಿಕಾ ಪಂಡಿತ್ 7 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. 2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಈ ಮಾದರಿ ದಂಪತಿಗೆ ಐರಾ ಮತ್ತು ಯಥರ್ವ್ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ.. ವೃದ್ಧ ಬಲಿ



















