ಲಂಡನ್- ಏನು ಹೇಳದೆಯೇ ಎಲ್ಲವನ್ನೂ ಮಾಡುವ ರಾಕಿಂಗ್ ಸ್ಟಾರ್ ಯಶ್ ನೇಚರ್ ಈಗಲೂ ಮುಂದುವರೆದಿದೆ. ಟಾಕ್ಸಿಕ್ ಚಿತ್ರವನ್ನು ಗ್ಲೋಬಲ್ ಲೆವೆಲ್ ಕೊಂಡೊಯ್ಯುವ ಉತ್ಸಾಹದಲ್ಲೇ ಸ್ಯಾಂಡಲ್ ವುಡ್ ಅಣ್ತಮ್ಮ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ರಾಕಿಬಳಗಕ್ಕೆ ಡಬಲ್ ಧಮಾಕ ಸೃಷ್ಟಿಸುವ ಎರಡೆರಡು ಲೇಟೆಸ್ಟ್ ಅಪ್ ಡೇಟ್ ಪ್ರತ್ಯಕ್ಷವಾಗಿದೆ..!

ಕೆಜಿಎಫ್ ಸರಣಿಯ ನಂತರ ಯಶ್ ಏನ್ ಮಾಡುತ್ತಾರೆ ಎಂಬ ದೊಡ್ಡ ಕುತೂಹಲವಿತ್ತು. ಪ್ಯಾನ್ ಇಂಡಿಯನ್ ಸಿನಿಮಾ ಬಿಟ್ಟು ಪ್ಯಾನ್ ವರ್ಲ್ಡ್ ಗುರಿಯತ್ತ ಮುಖ ಮಾಡಿರುವ ಯಶ್ ಈಗ ನಿಧಾನವಾಗಿ ಅದನ್ನು ಸಾಕಾರಗೊಳಿಸುತ್ತಿದ್ದಾರೆ. ಮುಂಬೈನಲ್ಲಿ ಟಾಕ್ಸಿಕ್ ಆಕ್ಷನ್ ಸಿಕ್ವೆನ್ಸ್ ಶೂಟಿಂಗ್ ಮುಗಿಸಿರುವ ಯಶ್ ಲಂಡನ್ ಗೆ ಹೋಗಿದ್ದಾರೆ. ಇದರಲ್ಲೂ ಫ್ಯಾನ್ಸ್ ಗೆ ಒಂದು ಇಂಟ್ರೆಸ್ಟಿಂಗ್ ಟ್ವಿಸ್ಟ್ ಇದೆ.

ಯಶ್ ಎಲ್ಲೂ ಟಾಕ್ಸಿಕ್ ಚಿತ್ರದ ಸ್ಟೋರಿ ಲೈನ್ ಬಿಟ್ಟು ಕೊಟ್ಟಿಲ್ಲ. ಇಂಟ್ರೊಡಕ್ಷನ್ ಟೀಸರ್ ನಲ್ಲೇ ತಲೆಗೆ ಹುಳ ಬಿಟ್ಟಿದ್ದ ಅಣ್ತಮ್ಮ, ಫ್ಯಾನ್ಸ್ ಕುತೂಹಲವನ್ನು ಹಾಗೆ ಕಾಪಾಡಿಕೊಂಡಿದ್ದಾರೆ. ಇದೀಗ ಬಂದಿರುವ ಲೇಟೆಸ್ಟ್ ಅಪ್ ಡೇಟ್ ಪ್ರಕಾರ, ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ ಮಾಡುತಿದ್ದಾರೆ. ಒಬ್ಬ ಗ್ಯಾಂಗ್ ಸ್ಟಾರ್, ಇನ್ನೊಬ್ಬ ಜೋಕರ್ ಎನ್ನುವ ಮಾದರಿಯಲ್ಲೇ ಯಶ್ ಕಾಣಿಸಿಕೊಳ್ಳುತ್ತಾರೆ. ಇದುವರೆಗೂ ಯಶ್ ತಮ್ಮ ಕೆರಿಯರ್ ನಲ್ಲಿ ದ್ವಿಪಾತ್ರದಲ್ಲಿ ಆಕ್ಟ್ ಮಾಡಿರಲಿಲ್ಲ. ‘ಯಶ್-19’ ಟಾಕ್ಸಿಕ್ ಈ ವಿಶೇಷಕ್ಕೆ ಕಾರಣವಾಗುತ್ತಿದೆ.

ಯಶ್ ಎಲ್ಲಿ ಹೋದರು ಮಾಸ್ಕ್ ಹಾಕಿಕೊಂಡು ತಿರುಗುತ್ತಿದ್ದಾರೆ. ಮೀಸೆ ಮತ್ತು ಗಡ್ಡದ ಸ್ಟೈಲ್ ರಿವೀಲ್ ಮಾಡಬಾರದು ಎಂದು ಯಶ್ ಎಚ್ಚರವಹಿಸಿದ್ದಾರೆ. ಯಶ್ ಲಂಡನ್ ಗೆ ಹೋಗಿರುವುದು ಅಂತರಾಷ್ಟ್ರೀಯ ಸಿನಿಮಾ ವಿತರಕರನ್ನು ಭೇಟಿಯಾಗೋಕೆ..! 2026 ಮಾರ್ಚ್.19ಕ್ಕೆ ವರ್ಲ್ಡ್ ವೈಡ್ ರಿಲೀಸ್ ಮಾಡುತ್ತಿರುವ ಕಾರಣಕ್ಕೆ ಯಶ್ ಕೆಲವು ಪೂರ್ವತಯಾರಿಗಳನ್ನು ಮಾಡಿಕೊಳುತಿದ್ದಾರೆ. ಟಾಕ್ಸಿಕ್ ವಿಷಕಾರಿ ಎಂಟ್ರಿ ಮಾಮೂಲಿಯಾಗಿರಲ್ಲ ಎಂಬುದೇ ರಾಕಿಭಾಯ್ ಸೈಲೆಂಟ್ ಸಂದೇಶ.