ಮುಂಬೈ: ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹುನಿರೀಕ್ಷಿತ 2026ರ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ (WPL) ವೇಳಾಪಟ್ಟಿ ಪ್ರಕಟವಾಗಿದ್ದು, ಜನವರಿ 9 ರಿಂದ ಕ್ರಿಕೆಟ್ ಹಬ್ಬ ಶುರುವಾಗಲಿದೆ. ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ, 2023ರ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು 2024ರ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಸೆಣಸಾಡಲಿವೆ.
ಎರಡು ನಗರಗಳಲ್ಲಿ ಟೂರ್ನಿ ಆಯೋಜನೆ
ಈ ಬಾರಿಯ ಟೂರ್ನಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಚರಣದ ಪಂದ್ಯಗಳು ಜನವರಿ 9 ರಿಂದ 17ರವರೆಗೆ ನವಿ ಮುಂಬೈನಲ್ಲಿ ಜರುಗಲಿವೆ. ನಂತರದ ದ್ವಿತೀಯ ಚರಣದ ಪಂದ್ಯಗಳಿಗೆ ಗುಜರಾತ್‌ನ ವಡೋದರಾ ಆತಿಥ್ಯ ವಹಿಸಲಿದೆ. ಜನವರಿ 19 ರಿಂದ ಫೆಬ್ರವರಿ 5 ರವರೆಗೆ ವಡೋದರಾದಲ್ಲಿ ಲೀಗ್ ಪಂದ್ಯಗಳು, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಟೂರ್ನಿಯ ಸ್ವರೂಪ
ಲೀಗ್ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಅಗ್ರ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳ ನಡುವೆ ಫೆಬ್ರವರಿ 3 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ವಿಜೇತ ತಂಡ ಫೆಬ್ರವರಿ 5 ರಂದು ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿದೆ.
ಹರಾಜು ಪ್ರಕ್ರಿಯೆ ಮತ್ತು ತಂಡಗಳು
ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲಿ 5 ತಂಡಗಳು ಒಟ್ಟು 67 ಆಟಗಾರರನ್ನು ಖರೀದಿಸಿವೆ. ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾ ಬರೋಬ್ಬರಿ 3.2 ಕೋಟಿ ರೂ.ಗಳಿಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಹರಾಜಿನಲ್ಲಿ ಒಟ್ಟು 277 ಆಟಗಾರರು ಲಭ್ಯವಿದ್ದರು.
WPL 2026 ಪೂರ್ಣ ವೇಳಾಪಟ್ಟಿ
ನವಿ ಮುಂಬೈ ಚರಣ (ಸ್ಥಳ: ಡಿ.ವೈ. ಪಾಟೀಲ್ ಸ್ಟೇಡಿಯಂ)
- ಜ. 09: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜ. 10: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ (ಮಧ್ಯಾಹ್ನ)
- ಜ. 10: ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ (ಸಂಜೆ)
- ಜ. 11: ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
- ಜ. 12: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
- ಜ. 13: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್
- ಜ. 14: ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್
- ಜ. 15: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
- ಜ. 16: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
- ಜ. 17: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ (ಮಧ್ಯಾಹ್ನ)
- ಜ. 17: ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ)
ವಡೋದರಾ ಚರಣ - ಜ. 19: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜ. 20: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
- ಜ. 22: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
- ಜ. 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್
- ಜ. 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
- ಜ. 27: ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್
- ಜ. 29: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಜ. 30: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
- ಫೆ. 01: ದೆಹಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್
ಪ್ಲೇ-ಆಫ್ಸ್ - ಫೆ. 03: ಎಲಿಮಿನೇಟರ್
- ಫೆ. 05: ಫೈನಲ್
ಇದನ್ನೂ ಓದಿ: ದೇಶೀ ಕ್ರಿಕೆಟ್ ಮರೆತರೆ ಸ್ಪಿನ್ ಎದುರಿಸುವುದು ಕಷ್ಟ ; ಟೀಮ್ ಇಂಡಿಯಾಗೆ ಕಪಿಲ್ ದೇವ್ ಚಾಟಿ



















