ಬೆಂಗಳೂರು: ಹೀಲಿ ಮ್ಯಾಥ್ಯೂಸ್ ಅವರ ಮಾರಕ ಬೌಲಿಂಗ್ ದಾಳಿ (16 ರನ್ಗಳಿಗೆ 3 ವಿಕೆಟ್) ಮತ್ತು ನ್ಯಾಟ್ ಸೀವರ್ ಬ್ರಂಟ್ (57 ರನ್, 26/2) ಅವರು ನೀಡಿದ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಮಿಂಚಿದ ಮುಂಬೈ ಇಂಡಿಯನ್ಸ್ ತಂಡ , ಡಬ್ಲ್ಯುಪಿಎಲ್ನಲ್ಲಿ ಮೊದಲ ಗೆಲುವು ದಾಖಲಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ್ದ ಹರ್ಮನ್ ಪಡೆ, ಇದೀಗ ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆರಂಭಿಕ ಸೋಲಿನಿಂದ ಹೊರಬಂದು 2ನೇ ಪಂದ್ಯದಲ್ಲಿ ಗೆದ್ದಿದ್ದ ಗುಜರಾತ್, ಇದೀಗ ತನ್ನ 3ನೇ ಪಂದ್ಯದಲ್ಲಿ 5 ವಿಕೆಟ್ಗಳಿಂದ ಪರಾಜಯ ಕಂಡಿದೆ.
ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ 5ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ 20 ಓವರ್ಗಳಲ್ಲಿ 120 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮುಂಬೈ 16.1 ಓವರ್ಗಳಲ್ಲೇ ಚೇಸ್ ಮಾಡಿತು. 23 ಎಸೆತಗಳು ಬಾಕಿ ಉಳಿದವು.