ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತನ್ನ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿರುವ ಔಟ್ ಫಿಟ್ ಬೆಲೆ ಕೇಳಿದರೆ ನೀವು ಖಂಡಿತವಾಗಲೂ ಶಾಕ್ ಆಗ್ತೀರಿ.
ಯಾರೂ ಊಹಿಸಲು ಸಾಧ್ಯವಾಗದಷ್ಟು ಬೆಲೆ ಇದೆ. ಸಾಮಾನ್ಯವಾಗಿ ಬಾಲಿವುಡ್ ನಟಿಯರು ಧರಿಸುವ ಉಡುಗೆಗಳು ದುಬಾರಿ ವೆಚ್ಚದಲ್ಲಿರುತ್ತವೆ. ಅದರಲ್ಲೂ ರಶ್ಮಿಕಾ ಮಂದಣ್ಣ ತನ್ನ ಬರ್ತಡೇಗೆ ಧರಿಸಿದ ಜಸ್ಟ್ ಟಾಪ್ ಗೆ ಬರೋಬ್ಬರಿ 90 ಸಾವಿರ ರೂ. ದರ ಇದೆ. ಅವರು ಸ್ಟೈಲ್ ಆಗಿ ಹಿಡಿದುಕೊಂಡಿದ್ದ ಬ್ಯಾಗ್ ನ ಬೆಲೆ 2,74,900 ರೂ. ಇದೆ. ಈಗ ಈ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಕಳೆದ ವರ್ಷ ಕೂಡ ರಶ್ಮಿಕಾ ಮಂದಣ್ಣ ತನ್ನ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದರು. ಆ ವೇಳೆ ವಿಜಯ್ ದೇವರಕೊಂಡ ಅವರ ಜೊತೆ ಫೋಟೋಗಳನ್ನು ಶೇರ್ ಮಾಡಿ, ಒಂದಿಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದರು. ಪ್ರತಿ ಬಾರಿಯೂ ತನ್ನ ಹುಟ್ಟು ಹಬ್ಬದ ಸಮಯದಲ್ಲಿ ಫ್ಯಾಮಿಲಿಯ ಜೊತೆ ಇರದೇ ಬೇರೆ ಸ್ಥಳಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಳ್ಳುವ ಇವರು ಒಬ್ಬರೇ ಸಮಯವನ್ನು ಕಳೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಬೀಚ್ ಬಳಿ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಯಾಕ್ ಗ್ರೌಂಡ್ ನಲ್ಲಿ ರೆಡ್ ಕಲರ್ ಬಾವುಟವಿದೆ. ಅದರಂತೆ ವಿಜಯ್ ಶೇರ್ ಮಾಡಿರುವ ಪೋಸ್ಟ್ ನಲ್ಲಿ ಇದೇ ರೀತಿಯ ಬಾವುಟ ಕಾಣಿಸಿದೆ. ಇದರಿಂದ ಇಬ್ಬರೂ ಜೊತೆಯಾಗಿ ಒಮನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇಬ್ಬರ ಪೋಸ್ಟ್ ನಿಂದ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.