ಬ್ರ್ಯಾಂಡ್ ಬೆಂಗಳೂರಿನ ಬಿಗ್ ಕನಸ್ಸಿಗೆ ಜಾಗ ಸಿಗದಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ.
ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗಲು ಸಿದ್ಧವಾಗಿದ್ದ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣದ ಕನಸಿಗೆ ಪದೆ ಪದೆ ಹಿನ್ನೆಡೆಯಾಗುತ್ತಿದೆ. ಈಗಾಗಲೇ ಹೆಮ್ಮಿಗೆಪುರದ ಹತ್ತಿರ ಸ್ಕೈಡೆಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಹೆಮ್ಮಿಗೆಪುರ ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆಯ ಮೇರೆಗೆ ಪಾಲಿಕೆಯು ಬೇರೆಡೆ ಸ್ಥಳ ಹುಡುಕಲು ಮುಂದಾಗಿದೆ. ಈ ಸ್ಕೈಡೆಕ್ ಸುಮಾರು 800 ಕೋಟ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯ ಮಧ್ಯೆ ಈ ಸ್ಕೈಡೆಕ್ ನಿರ್ಮಿಸಿ, ಪ್ರವಾಸೋದ್ಯಮ ಉತ್ತೇಜಿಸುವ ಚಿಂತನೆಯೂ ಸರ್ಕಾರ ಹಾಗೂ ಬಿಬಿಎಂಪಿ ಮುಂದಿದೆ. ಹೀಗಾಗಿಯೇ ಜಾಗ ಹುಡುಕುತ್ತಿದೆ. ಆದರೆ ಅದಕ್ಕೆ ನೂರೆಂಟು ತೊಡಕುಗಳು ಮಾತ್ರ ಎದುರಾಗುತ್ತಿವೆ.