ಬೆಂಗಳೂರು | ಇತ್ತೀಚಿಗೆ ಹೊಸಬರ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲಿಗಲ್ಲನ್ನು ಸೃಷ್ಟಿಸುತ್ತಿದೆ. ಅದೇ ರೀತಿ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಈ ‘ಸಿಂಹಪುರಿಯಸಿಂಹ’. ಚಿತ್ರದ ನಾಯಕ ನಟರಾಗಿ ಕೆ.ವೈ.ಮೂರ್ತಿಯವರು ಅಭಿನಯಿಸಿದ್ದು, ನಾಯಕಿಯಾಗಿ ಸೌಜನ್ಯ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸಹಕಲಾವಿದರಾಗಿ ಶಂಕರ್ ಭಟ್, ಉಮೇಶ್, ಬ್ಯಾಂಕ್ ಜನಾರ್ಧನ್, ಜೂನಿಯರ್ ದ್ವಾರಕೀಶ್, ಪದ್ಮವಾಸಂತಿ, ರೇಖಾದಾಸ್ ,ಪ್ರಸನ್ನ ಹಾಗೂ ಮುತ್ತುರಾಜ್ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರದ ,ಕಥೆಚಿತ್ರಕಥೆ ,ನಿರ್ದೇಶನ ,ನಿರ್ಮಾಪಕರು ಕೆ ವೈ ಮೂರ್ತಿಯವರು ಮಾಡಿದ್ದಾರೆ.
ಛಾಯಾಗ್ರಾಹಣ ಗುರುದತ್ ಮುಸುರಿ ,ಮನೋಹರ್, ಸಿ ಎಸ್ ಸತೀಶ್ ಸಂಗೀತ ಕೃಪಾಕರ್ ,ಸಂಕಲನ ಅರುಣ್ ಬೆಂಗಳೂರು ಮೂವೀಸ್ ಸಾಹಸ ದೃಶ್ಯ ಅಲ್ಟಿಮೇಟ್ ಶಿವು ,ಜಾನಿ ಮಾಸ್ಟರ್ ಸಂಭಾಷಣೆ ಸುದರ್ಶನ್ ಇನ್ನು ಈ ಚಿತ್ರದಲ್ಲಿ ಸಾಂಗುಗಳು ಇರಲಿದ್ದು .ಸಂಗೀತ ಗಾಯಕರು ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ಪ್ರಿಯಾ ಯಾದವ್, ಸ್ನೇಹಪ್ರಿಯ ನಾಗರಾಜ್ ಇದ್ದಾರೆ.
ಚಿತ್ರದ ಪೋಸ್ಟರ್ ನೋಡುತ್ತಿದ್ದರೆ, ಒಂದು ರಹಸ್ಯ ಕಥೆಯೊಂದಿಗೆ ಹೇಳಲು ಹೊರಟಿರುವ ಚಿತ್ರತಂಡ. ಚಿತ್ರದಲ್ಲಿ ಆಕ್ಷನ್, ಸಾಂಗ್ಸ್, ರೋಮ್ಯಾನ್ಸ್ ಹಾಗೂ ಸಸ್ಪೆನ್ಸ್ ದೃಶ್ಯಗಳಿದ್ದು, ಚಿತ್ರತಂಡ ಅತಿ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಲು ರೆಡಿ ಇದೆ. ಈ ಚಿತ್ರವನ್ನ ಉಮೇಶ್ ಕೆ.ಎನ್ ಡಿಜಿಟಲ್ ಮಾರ್ಕೆಟಿಂಗ್ ಮಾಡುತ್ತಿದ್ದು, ಚಿತ್ರವನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡ್ತಿದಾರೆ. ಚಿತ್ರತಂಡದವತಿಯಿಂದ ಕರ್ನಾಟಕಕ್ಕೆ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಇದನ್ನೂ ಓದಿ : ಒಬ್ಬರಿಗೊಬ್ಬರು ಕ್ಷಮೆ ಕೇಳಿ ಬಿಗಿದಪ್ಪಿಕೊಂಡ ಗಿಲ್ಲಿ-ಅಶ್ವಿನಿ.. ವಿಡಿಯೋ ನೋಡಿ!



















