ರಾಮನಗರ: ವರ್ಕ್ ಫ್ರಾಮ್ ಹೋಮ್ ಕೆಲಸದ ಆಮಿಷವೊಡ್ಡಿ ಮಹಿಳೆಯರಿಗೆ ಭಾರೀ ಪ್ರಮಾಣದಲ್ಲಿ ವಂಚನೆ ಮಾಡಿರುವ ಘಟನೆಯೊಂದು ನಡೆದಿದೆ.
ಕೆಲಸದ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಬರೋಬ್ಬರಿ 20 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಕನಕಪುರ ತಾಲೂಕಿನ ದೊಡ್ಡ ಆನಮಾನಹಳ್ಳಿಯ ಎಸ್.ಶಾಲಿನಿ ಎಂಬ ಮಹಿಳೆಗೆ16 ಲಕ್ಷ ರೂ. ವಂಚಿಸಿದರೆ, ಚನ್ನಪಟ್ಟಣ ಟೌನ್ ಮದೀನ ಚೌಕ್ ನಿವಾಸಿ ಶಾಹಿದಾ ಬಾನು 3,46,000 ರೂ. ವಂಚಿಸಿದ್ದಾರೆ. ಈ ಕುರಿತು ರಾಮನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಿನಿ ಅವರಿಗೆ ವರ್ಕ್ ಫ್ರಾಮ್ ಹೋಮ್ ಕೆಲಸ ಇದೆ ಎಂದು ಫೋನ್ ಕರೆ ಬಂದಿದೆ. ಆಗ ಕೆಲಸಕ್ಕೆ ಶಾಲಿನಿ ಒಪ್ಪಿಕೊಂಡಿದ್ದಾರೆ. ನಂತರ ಮೊಬೈಲ್ ವಾಟ್ಸ್ ಆ್ಯಪ್ ಲಿಂಕ್ವೊಂದು ಕಳುಹಿಸಿದ್ದು, ಟೆಲಿಗ್ರಾಮ್ ಗ್ರೂಪ್ ಗೂ ಆ್ಯಡ್ ಮಾಡಿದ್ದಾರೆ. ನಂತರ ಟಾಸ್ಕ್ ಹೆಸರಿನಲ್ಲಿ ಹಂತಹಂತವಾಗಿ 16,55,556 ರೂ. ಗಳನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಇದೇ ರೀತಿ ಶಾಹಿದಾ ಬಾನುಗೂ ಮೋಸ ಮಾಡಿದ್ದಾರೆ.