ಮುಂಬೈ: ಭಾರತವು ಮಹಿಳಾ ಒಡಿಐ ವಿಶ್ವಕಪ್ ಅನ್ನು ತಾತ್ಕಾಲಿಕ ದಿನಾಂಕದ ಪ್ರಕಾರ ಸೆಪ್ಟೆಂಬರ್‌ನಲ್ಲಿ ಆಯೋಜಿಸಲು ಸಜ್ಜಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಉದ್ಘಾಟನಾ ಪಂದ್ಯ ಮತ್ತು ಉದ್ಘಾಟನಾ ಸಮಾರಂಭವು ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಇತರ ಪಂದ್ಯಗಳು ಪಂಜಾಬ್, ಮುಲ್ಲನ್‌ಪುರ್, ಇಂದೋರ್, ತಿರುವನಂತಪುರಂ ಮತ್ತು ಗುವಾಹಟಿಯಲ್ಲಿ ಆಯೋಜನೆಯಾಗಲಿದೆ. ಉದ್ಘಾಟನಾ ಸಮಾರಂಭವು ವಿಶಾಖಪಟ್ಟಣಂನಲ್ಲಿ ನಡೆಯುವ ನಿರೀಕ್ಷೆಯಿದೆ.
ಈ ನಿರ್ಧಾರವನ್ನು ಬಿಸಿಸಿಐ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇಲ್ಲಿ ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದ ವಿವಿಧ ಅಜೆಂಡಾಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.
ಭಾರತದ ಹಿರಿಯ ಪುರುಷರ ತಂಡವು ಅಕ್ಟೋಬರ್ ಮೊದಲ ವಾರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಮೊದಲ ಟೆಸ್ಟ್ ಮೊಹಾಲಿಯಲ್ಲಿ ನಡೆಯಲಿದೆ.
ರಡನೇ ಟೆಸ್ಟ್ ಅಕ್ಟೋಬರ್ 10ರಿಂದ 14ರವರೆಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಸುಮಾರು ಆರು ವರ್ಷಗಳ ನಂತರ ಕೊಲ್ಕತ್ತಾಕ್ಕೆ ಟೆಸ್ಟ್ ಕ್ರಿಕೆಟ್ ಮರಳಿದೆ. ಈಡನ್ ಗಾರ್ಡನ್ಸ್ ಕೊನೇ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದು, ನವೆಂಬರ್ 2019ರಲ್ಲಿ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಿಂಕ್-ಬಾಲ್ ಪಂದ್ಯ ಅದಾಗಿತ್ತು.
ಗುವಾಹಟಿಯಲ್ಲಿ ಟೆಸ್ಟ್
ಈ ವರ್ಷದ ನವೆಂಬರ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧವೂ ಆಡಲಿದೆ. ಮೊದಲ ಟೆಸ್ಟ್ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ನವೆಂಬರ್ 22ರಿಂದ 26ರವರೆಗೆ ಗುವಾಹಟಿಯಲ್ಲಿ ನಡೆಯಲಿದೆ. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗುವಾಹಟಿಯ ಬರ್ಸಪಾರಾ ಸ್ಟೇಡಿಯಂ ಟೆಸ್ಟ್ ಪಂದ್ಯ ನಡೆಯುವ ಮೊದಲ ಸಂದರ್ಭವಾಗಲಿದೆ.
ಪುರುಷರ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಒಡಿಐಗಳನ್ನು ರಾಂಚಿ, ರಾಯ್‌ಪುರ್ ಮತ್ತು ವಿಶಾಖಪಟ್ಟಣಂನಲ್ಲಿ ಕ್ರಮವಾಗಿ ನವೆಂಬರ್ 30, ಡಿಸೆಂಬರ್ 3 ಮತ್ತು ಡಿಸೆಂಬರ್ 6ರಂದು ಆಡಲಿದೆ. ಒಡಿಐ ಸರಣಿಯ ನಂತರ ಐದು ಟಿ20 ಪಂದ್ಯಗಳು ಡಿಸೆಂಬರ್ 9, 11, 14, 17 ಮತ್ತು 19ರಂದು ಕಟಕ್, ನಾಗ್ಪುರ, ಧರ್ಮಶಾಲಾ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.
ದೇಶೀಯ ಕ್ರಿಕೆಟ್‌ನಲ್ಲಿ, ಆರು ವಲಯಗಳೊಂದಿಗೆ ವಲಯ ವ್ಯವಸ್ಥೆ ಮರಳಿದೆ. ದುಲೀಪ್ ಟ್ರೋಫಿಯು ಋತುವಿನಲ್ಲಿ ಮೊದಲಿಗೆ ಆಡಲಾಗುವುದು ಮತ್ತು ದೇಶೀಯ ಕ್ರಿಕೆಟ್ ಹಿಂದಿನಂತೆಯೇ ನಿಯಮಗಳನ್ನು ಅನುಸರಿಸುತ್ತದೆ. ಋತುವು ಕಳೆದ ವರ್ಷದಂತೆ ಆರಂಭವಾಗಲಿದೆ.
ಹೆಚ್ಚುವರಿಯಾಗಿ, ಸ್ಕೋರರ್‌ಗಳ ಪಾವತಿಯಲ್ಲಿ ಏಕರೂಪತೆಯನ್ನು ಪರಿಚಯಿಸಲಾಗಿದೆ. ಪ್ರತಿ ಸ್ಕೋರರ್‌ಗೆ ದೇಶೀಯ ಪಂದ್ಯಕ್ಕೆ 15,000 ರೂಪಾಯಿಗಳು ಸಿಗಲಿದೆ.