ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರೊಂದಿಗೆ ಚಹಾ ಸವಿಯುತ್ತ ಸಂವಾದದಲ್ಲಿ ಭಾಗಿಯಾಗಿದ್ದಾರೆ.
ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮುಂದಿನ ಬಾರಿ ಒಡಿಶಾಗೆ ಬಂದಾಗ ನಮ್ಮ ಮನೆಗೆ ಊಟಕ್ಕೆ ಬರುವಂತೆ ಪ್ರಧಾನಿಗೆ ಆಹ್ವಾನ ನೀಡಿದರು.
ಓರ್ವ ಮಹಿಳೆ ನಿಮಗಾಗಿ ಶಬರಿ ಕಾದಂತೆ ಕಾದಿದ್ದೇವೆ ಎಂದರು. ಮತ್ತೋರ್ವ ಮಹಿಳೆ ಕುರ್ತಾ ವಿನ್ಯಾಸಗೊಳಿಸಿ, ಹೊಲೆದು ಕೊಡುವುದಾಗಿ ಹೇಳಿದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆಯಲ್ಲಿ ಗಡಕಾನಾ ಪ್ರದೇಶದ ಸಬರ್ ಸಾಹಿ ಸ್ಲಂಗೆ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸದರು. ಭುವನೇಶ್ವರ ವಿಮಾನ ನಿಲ್ದಾಣದಿಂದ ಗಡಕಾನಾವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಜನರು ವಿಶೇಷವಾಗಿ ಮಹಿಳೆಯರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.