ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶಿಡ್ಲಭಾವಿ ಗ್ರಾಮದಲ್ಲಿ ವಿಂಡ್ ಫ್ಯಾನ್ ಕಂಪನಿಯವರಿಂದ ಮಹಿಳೆಯರು ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ವಿಂಡ್ ಫ್ಯಾನ್ ಕಂಪನಿಯ ಮಾಲೀಕರು ಹಣ ಕೊಟ್ಟು ಹೊರ ತಾಲೂಕಿನ ಮಹಿಳೆಯರನ್ನು ಕರೆತಂದು ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ. ವಿಂಡ್ ಫ್ಯಾನ್ ಕಂಪನಿಯ ದೌರ್ಜನ್ಯಕ್ಕೆ ಬೇಸತ್ತ ಕೊಪ್ಪಳ ಜಿಲ್ಲೆಯ ಮಹಿಳೆಯರು ನಮಗೆ ಬದುಕಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ವಿಂಡ್ ಫ್ಯಾನ್ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಪರವಾನಿಗೆ ರದ್ದು ಮಾಡಿದರು ಕೂಡ ದೌರ್ಜನ್ಯದಿಂದ ಗ್ರಾಮಗಳ ಬಳಿ ವಿಂಡ್ ಫ್ಯಾನ್ ನಿರ್ಮಾಣ ಮಾಡುತ್ತಿದ್ದು, ನಮ್ಮ ಮನೆಗಳ ಪಕ್ಕದಲ್ಲಿ ವಿಂಡ್ ಫ್ಯಾನ್ ಹಾಕುವುದು ಬೇಡ, ವಿಂಡ್ ಫ್ಯಾಕ್ ಹಾಕಿದರೆ ಮನೆಗಳು-ಜಮೀನುಗಳಿಗೆ ಹಾನಿಯಾಗುತ್ತೆ ಎಂದು ಪುಟ್ಟ -ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಸ್ಥಳೀಯ ಮಹಿಳೆಯರು ಕಣ್ಣೀರು ಹಾಕಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಂಡ್ ಫ್ಯಾನ್ ಕಂಪನಿಯ ಮಾಲೀಕರು, ಅಧಿಕಾರಿಗಳಿಗೆ ದುಡ್ಡು ಕೊಟ್ಟು ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿ, ಕೆಲಸ ಸ್ಥಗಿತಗೊಳಿಸಿ ಇಲ್ಲವೆ ನಮಗೆ ವಿಷ ಕೊಡಿ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಪ್ರಭಾವಿ ಕಂಪನಿಗಳ ಮಾಲೀಕರಿಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.