ಬೆಳಗಾವಿ: ಮಹಿಳೆಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲಾಕ್‌ಮೇಲ್ ಮಾಡಿದ್ದ ಪ್ರಕರಣದಲ್ಲಿ ಇದೀಗಾ ಮುಖ್ಯ ಆರೋಪಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಸರ್ಕಾರಿ ನೌಕರ ವಿನೋದ ಟಿ. ಬಂಧಿತ ಆರೋಪಿ. ಈಗಾಗಲೇ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಮುಂದೆ ಬಿಟ್ಟು ವಿಡಿಯೋ ಮಾಡಿಸಿ, ಬ್ಲಾಕ್‌ಮೇಲ್ ಮಾಡಿದ್ದು, ಇದೇ ವಿನೋದ್ ಎಂದು ತಿಳಿದು ಬಂದಿದೆ. ಬಂಧಿತ ವಿನೋದ ಮೊಬೈಲ್ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಹಿಳೆಯ ಖಾಸಗಿ ದೃಶ್ಯ ಸಂಗ್ರಹಿಸಲು ಆರೋಪಿಗಳು ಖತರನಾಕ್ ಪ್ಲಾನ್ ಮಾಡಿದ್ದರು. ಆ ಮಹಿಳೆಯ ಮನೆಯ ಹೋಲ್ಡರ್ನಲ್ಲಿ 8 ರಹಸ್ಯ ಕ್ಯಾಮರಾ ಇಟ್ಟಿದ್ದರು. ಅವರ ಖಾಸಗಿ ವಿಡಿಯೋವನ್ನು ಸೆರೆ ಹಿಡಿದು 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗೆ ಬಂದ ಹಣದಲ್ಲಿ ವಿನೋದ್ ಸೇರಿ ನಾಲ್ಕು ಆರೋಪಿಗಳಿಗೆ ಪಾಲು ಇತ್ತಂತೆ. ಬಂದ ಹಣದಲ್ಲಿ ವಿನೋದ ಮನೆ ಕಟ್ಟಲು ಪ್ಲಾನ್ ಮಾಡಿದ್ದ. ಆದರೆ, ಆ ಮಹಿಳೆ ಕೊಟ್ಟ ದೂರಿನಿಂದ ಆರೋಪಿಗಳ ಯೋಜನೆ ಉಲ್ಟಾ ಆಗಿ, ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ವಿನೋದ್ ಟಿ.ಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಈಗಾಗಲೇ ಗೋಕಾಕ್ ಜಲಾಲ್ ಗಲ್ಲಿಯ ಸಮೀರ್ ನಿಸಾರ್ ಅಹಮ್ಮದ್ ಶೇಖ್(32), ಗೋಕಾಕ್ ತಾಲೂಕಿನ ಯೋಗಿಕೊಳ್ಳದ ಅಬ್ದುಲ್‌ರಶೀದ್ ನಜೀರ್ ಅಹಮ್ಮದ್ ಮಕಾಂದಾರ್(51) ಮತ್ತು ಗೋಕಾಕ ತಾಲೂಕಿನ ಘಟಪ್ರಭಾದ ಮೊಹಮ್ಮದ್ ದಿಲಾವರ್ ಬಾಳೇಕುಂದ್ರಿ(43) ಬಂಧನ ಮಾಡಿದ್ದು, ಇವರು ಜೈಲು ಕಂಬಿ ಎಣಿಸುತ್ತಿದ್ದಾರೆ. ಮತ್ತೊಂದು ಕಡೆ ಈ ಮೂವರು ಮೂರು ಬೇಲ್ಗೆ ಸಲ್ಲಿಸಿದ ಅರ್ಜಿ ಅಮಾನತ್ತಾಗಿದೆ.
ಇದನ್ನೂ ಓದಿ: ಬುಧವಾರ RCB ಮ್ಯಾಚ್ ಭವಿಷ್ಯ | ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?



















