ಬೆಂಗಳೂರು : ಓನ್ ವೇನಲ್ಲಿ ರಾಂಗ್ ಸೈಡ್‌ನಲ್ಲಿ ಮಹಿಳೆ ಬಂದಿದ್ದಲ್ಲದೇ , ಆಟೋ ಚಾಲಕನಿಗೆ ಕೆಟ್ಟ ಕೆಟ್ಟ ಪದಗಳಿಂದ ಬೈದು ಗಾಂಚಾಲಿ ತೋರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಬೈಯಪ್ಪನಹಳ್ಳಿಯ ಪ್ಲೇ ಓವರ್ ಬಳಿ ನಡೆದಿದೆ. ರಾಂಗ್ ಸೈಡ್‌ನಲ್ಲಿ ಬಂದು ಆಟೋಗೆ ಡಿಕ್ಕಿ ಹೊಡೆದಿದ್ದಲ್ಲದೆ ಆಟೋ ಚಾಲಕನಿಗೆಆವಾಜ್ ಹಾಕಿ ದರ್ಪ ತೋರಿಸಿದ್ದಾಳೆ. ಕೆಟ್ಟ ಕೆಟ್ಟ ಪದಗಳಿಂದ ಬೈದು ದರ್ಪ ತೋರಿದ್ದಾಳೆ.
ಟ್ರಾಫಿಕ್ ಪೋಲಿಸರ ಮುಂದೆಯೇ ರೌದ್ರನರ್ತನ ಮೆರಿದೆ ಈಕೆ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆದರೂ ಲೇಡಿ ಜಗಳವಾಡುವುದು ನಿಲ್ಲಿಸಿಲ್ಲ. ಕೊನೆಗೆ ಮಾಡದ ತಪ್ಪಿಗೆ ಆಟೋ ಚಾಲಕನೇ ಕ್ಷಮೆ ಕೇಳಿದ್ದಾನೆ.ಈ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಮೊಹಮ್ಮದ್ ಶಮಿಗೆ ಶುರುವಾಯ್ತು ಸಮಸ್ಯೆ ; ಹರಾಜಿಗೂ ಮುನ್ನವೇ ತಂಡದಿಂದ ಹೊರಕ್ಕೆ



















