ಕಲಬುರಗಿ : ಹಲ್ಲು ನೋವೆಂದು ಆಸ್ಪತ್ರೆಗೆ ಹೋದ ಮಹಿಳೆ ವೈದ್ಯರ ಎಡವಟ್ಟಿನಿಂದಾಗಿ ಕೋಮಾಗೆ ಜಾರಿರುವ ಘಟನೆಯೊಂದು ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ಜೇವರ್ಗಿಯ ನಾಜಿಯಾ ಬೇಗಂ ಹಲ್ಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಆ ವೇಳೆ ಅನೆಸ್ತೇಶಿಯಾ (Anesthesia) ಇಂಜೆಕ್ಷನ್ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಮಹಿಳೆ ಕೋಮಾಗೆ ಜಾರಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವೈದ್ಯರು ನಿರ್ಲಕ್ಷ್ಯದಿಂದಾಗಿ ನಾಜಿಯಾಗೆ ಅತಿಯಾದ ಅನೆಸ್ತೇಶಿಯಾ ನೀಡಿದ್ದಾರೆ. ಹೀಗಾಗಿ ಕಳೆದ 40 ದಿನಗಳಿಂದಲೂ ಆಸ್ಪತ್ರೆಯಲ್ಲೇ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇನ್ನೂ ಗುಣಮುಖವಾಗಿಲ್ಲ. ಈಗ ಗುಣಮುಖವಾಗುವ ಮೊದಲೇ “ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ವೈದ್ಯರು ಸೂಚಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಆರೋಪವನ್ನು ವೈದ್ಯರು ಅಲ್ಲಗಳೆದಿದ್ದಾರೆ. “ಮಹಿಳೆ ಕೋಮಾಗೆ ಹೋಗಲು ಅನೆಸ್ತೇಶಿಯಾ ಕಾರಣವಲ್ಲ, ಇನ್ನ್ಯಾವುದೋ ಕಾರಣದಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸರ್ಕಾರಕ್ಕೆ ಮತ್ತೊಂದು ಡೆಡ್ ಲೈನ್ | ತಾತ್ಕಾಲಿಕ ಮುಷ್ಕರ ಹಿಂಪಡೆದ ಸಾರಿಗೆ ಸಿಬ್ಬಂದಿ



















