ಚಿಕ್ಕಮಗಳೂರು : ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ನಾಳೆ ಮದುವೆ ಆಗಬೇಕಿದ್ದ ಯುವತಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಶೃತಿ, ಮೃತ ಮದುಮಗಳು.

24 ವರ್ಷದ ಶೃತಿ ನಾಳೆ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಡಲಿದ್ದಳು. ಮದುವೆ ಖುಷಿಯಲ್ಲಿದ್ದ ಶೃತಿಗೆ ಲೋ ಬಿಪಿ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಧು ಪ್ರಾಣ ಕಳೆದುಕೊಂಡಿದ್ದಾಳೆ.
ತರೀಕೆರೆ ಮೂಲದ ಯುವಕ ದಿಲೀಪ್ ಜೊತೆ ಮದುವೆ ನಿಶ್ಚಯವಾಗಿತ್ತು. ಸಂಭ್ರಮದಲ್ಲಿದ್ದ ಮದುವೆ ಮನೆ ಇದೀಗ ದುಃಖದಲ್ಲಿ ಮುಳುಗಿದೆ. ಮಗಳನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಮದುವೆ ಮೂಲಕ ಹೊಸ ಬದುಕಿನ ಕನಸು ಕಂಡಿದ್ದ ವರ ಆಘಾತಕ್ಕೆ ಒಳಗಾಗಿದ್ದಾನೆ.
ಇದನ್ನೂ ಓದಿ : RSS ಪಥಸಂಚಲನದಲ್ಲಿ ಭಾಗಿಯಾಗಿದ್ದ PDO ಅಮಾನತು ಆದೇಶಕ್ಕೆ KSAT ತಡೆ | ರಾಜ್ಯ ಸರ್ಕಾರಕ್ಕೆ ಮುಖಭಂಗ!



















