ಬೆಂಗಳೂರು : ಹಣ ಕೊಟ್ಟು ಸಹಾಯ ಮಾಡಿದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಬಸ್ ಸ್ಟ್ಯಾಂಡ್‌ನಲ್ಲಿ ನಡೆದಿದೆ.
ಕಾಮುಕನು ಬಸ್‌ಸ್ಟ್ಯಾಂಡ್ ಬಳಿ ಯುವತಿಯೊಬ್ಬಳ ಬಳಿ ಬಂದು ನಾನು ಮೆಜೆಸ್ಟಿಕ್‌ಗೆ ಹೋಗಬೇಕು 100 ರೂ. ಕೊಡಿ ಎಂದು ಸಹಾಯ ಕೋರಿದ್ದಾನೆ. ಹಣ ಕೊಟ್ಟ ಬಳಿಕ ಬಲವಂತವಾಗಿ ಮೈಮುಟ್ಟಿ, ಹಗ್ ಮಾಡು ಎಂದು ಹಿಂಸೆ ಕೊಡಲಾರಂಭಿಸಿದನು. ಅಲ್ಲದೆ ಯುವತಿಯ ವೈಯಕ್ತಿಕ ಮಾಹಿತಿಯನ್ನು ಕೇಳಿ ಯುವತಿಗೆ ಹಿಂಸೆ ನೀಡುತ್ತಿದ್ದನು. ನೀವು ಮದುವೆಯಾಗಿದ್ದೀರಾ ಒಬ್ಬಳೇ ಇರುತ್ತೀರ ಎಂದು ಅಸಭ್ಯವಾದ ಪ್ರಶ್ನೆ ಕೇಳಿ ಚಿತ್ರ ಹಿಂಸೆ ನೀಡುತ್ತಿದ್ದನು.
ಅವನು ನೀಡುತ್ತಿರುವ ಹಿಂಸೆ ತಾಳಲಾರದೇ ಯುವತಿ ವೀಡಿಯೋ ರೆಕಾರ್ಡ್ ಮಾಡಿದ್ದಾಳೆ. ಬಳಿಕ ಜೋರು ಧ್ವನಿ ಎತ್ತಿದ ಯುವತಿಗೆ ಹೆದರಿದ ಪುಂಡ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ : ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ‘ಲೋಕಾ’ ಶಾಕ್ | ರಾಜ್ಯದ 10 ಅಧಿಕಾರಿಗಳ ಮನೆ ಮೇಲೆ ದಾಳಿ!



















