ಉಡುಪಿಯಲ್ಲಿ ಕ್ಯಾನ್ಸರ್ ಚಿಕೆತ್ಸೆಗೆ 2.9ಲಕ್ಷ ಹಣ ನೀಡುತ್ತೇನೆಂದು ಆನ್ ಲೈನ್ ಅಲ್ಲಿ ವಂಚನೆ ಮಾಡಲಾಗಿದೆ.
ಫೇಸ್ಬುಕ್-ವಾಟ್ಸಾಪ್ ನಲ್ಲಿ ಸಹಾಯಕ್ಕೆ ಮನವಿ
ಭಾಗ್ಯಶ್ರೀ ತನ್ನ ಚಿಕಿತ್ಸೆಗೆ ಹಣದ ಸಹಾಯ ಕೋರಿ ಫೇಸ್ಬುಕ್ -ವಾಟ್ಸಾಪ್ ಗಳಲ್ಲಿ ಪೋಸ್ಟ್ ಗಳನ್ನು ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ ಮಹಿಳೆಗೆ ಸಹಾಯದ ನೆಪವೊಡ್ಡಿ 30 ಸಾವಿರ ರೂ. ವಂಚಿಸಿದ್ದಾನೆ ಎನ್ನಲಾಗಿದೆ.
ಮಂತ್ರಾಲಯದ ಹೆಸರು ಹೇಳಿ ವಂಚನೆ
ಮಹಿಳೆಯ ಪೋಸ್ಟ್ ಗಳನ್ನು ನೋಡಿ ಕರೆ ಮಾಡಿದ ವಂಚಕ, ನಾನು ಮಂತ್ರಾಲಯದಿಂದ ಕರೆ ಮಾಡುತಿದ್ದೇನೆ. ನಿಮ್ಮ ಚಿಕಿತ್ಸೆಗೆ 2.9 ಲಕ್ಷ ರೂ. ನಾವು ಕೊಡುತ್ತೇವೆ. ಆದರೇ ಮೊದಲಿಗೆ ನೀವು 29,900 ರೂ. ಟ್ಯಾಕ್ಸ್ ಕಟ್ಟಬೇಕು ಎಂದು ಸುಳ್ಳು ಹೇಳಿ ಮಹಿಳೆಗೆ ವಂಚಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚಕರು, ವಂಚನೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಆದಷ್ಟು ಅಪರಚಿತ ಸಂಖ್ಯೆಯಿಂದ ಕರೆಬಂದಾಗ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.