ಶಿವಮೊಗ್ಗ : ಜಿಲ್ಲೆಯ ಹೊಸನಗರದ ಸೂನಲೆ ಗ್ರಾಮದ ಮಹಿಳೆಯೊಬ್ಬರಿಗೆ ಕೆಎಫ್ಡಿ ಪಾಸಿಟಿವ್ ಬಂದಿದೆ. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದೀಗ ಕೆಎಫ್ಡಿ ಪಾಸಿಟಿವ್ ಬಂದ ಮಹಿಳೆ ಆರೋಗ್ಯವಾಗಿದ್ದಾರೆ. ಇದು ಕೆಎಫ್ಡಿ ಹರಡುವ ಸಮಯ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ಭಾಗದಲ್ಲಿ ಪ್ರತೀ ವರ್ಷ ಜ್ವರ ಹಾಗೂ ಇತರೆ ಲಕ್ಷಣಗಳು ಕಂಡುಬಂದಾಗ ಅವರ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.
ಕೆಎಫ್ಡಿ ರೋಗವು ಹೆಮಾಫಿಸಾಲಿಸ್ ಸ್ಪಿನಿಗೇರಾ ಎಂಬ ಕೀಟದಿಂದ ಮನುಷ್ಯನಿಗೆ ಹರಡುತ್ತದೆ. ಇದು ಕಾಡಿನಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ಗಾತ್ರದಲ್ಲಿರುತ್ತದೆ. ಮುಖ್ಯವಾಗಿ ಕಾಡು ಪ್ರಾಣಿಗಳ ಮೈಮೇಲೆ ವಾಸವಾಗಿರುತ್ತವೆ. ಪ್ರಾಣಿಗಳ ರಕ್ತ ಕುಡಿಯುತ್ತಾ ತನ್ನ ವಂಶಾಭಿವೃದ್ಧಿ ಮಾಡುತ್ತದೆ.
ಹೆಚ್ಚಾಗಿ ಮಂಗನ ದೇಹದಲ್ಲಿ ವಾಸವಾಗಿರುತ್ತದೆ. ಮಂಗ ಕಾಡಿನಲ್ಲಿ ಸತ್ತು ಹೋದರೂ, ಇದು ಬೇರೆ ಪ್ರಾಣಿಗಳಿಗೂ ಹರಡುತ್ತದೆ. ಇದಕ್ಕಾಗಿಯೇ ಈ ರೋಗಕ್ಕೆ ಮಂಗನ ಕಾಯಿಲೆ ಎಂದೂ ಕರೆಯುತ್ತಾರೆ. ಕಾಡಂಚಿನ ಗ್ರಾಮಗಳ ಜಾನುವಾರುಗಳನ್ನು ಕಾಡಿಗೆ ಮೇಯಿಸಲು ಹೋದಾಗ ಅವುಗಳಿಗೆ ಈ ಉಣ್ಣೆ ಹತ್ತಿಕೊಳ್ಳುತ್ತವೆ.
ಇದನ್ನೂ ಓದಿ : ನೀವು ಕಾರು ಖರೀದಿಸಿದ ಬಳಿಕ ಸಿಗಲಿದೆ 30 ಸಾವಿರ ರೂ. ರಿಫಂಡ್ : ಹೇಗೆ ಅಂತೀರಾ?



















