ಚಾಮರಾಜನಗರ: ಮಹಿಳೆಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಡೊಳ್ಳಿಪುರ ಗ್ರಾಮದಲ್ಲಿ ನಡೆದಿದೆ.
ಡೊಳ್ಳಿಪುರ ಗ್ರಾಮದ ಶುಭಾ (38) ಕೊಲೆಯಾಗಿರುವ ದುರ್ದೈವಿ. ತೋಟದ ಮನೆಯಲ್ಲಿ ಪತಿ, ಅತ್ತೆ ಜೊತೆ ಶುಭಾ ವಾಸವಿದ್ದರು. ಗಂಡ ಮಹೇಶ್, ಮೃತಳ ಅತ್ತೆ ಮನೆಯಲ್ಲಿದ್ದರೂ ಶುಭಾ ಕೊಲೆಯಾಗಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಮನೆಯಿಂದ ಹೊರಗೆ ಮಹಿಳೆ ಕೊಲೆಯಾಗಿ ಬಿದ್ದಿದ್ದಾಳೆ. ಮುಖ ಹಾಗೂ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತನ್ನ ಸೊಸೆಯನ್ನು ಯಾರೋ ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ಕರೆ ಮಾಡಿ ಅತ್ತೆ ದೂರು ನೀಡಿದ್ದಾರೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.