ಬೆಂಗಳೂರು : ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಕ್ಯಾಬ್ ಚಾಲಕ ಮತ್ತು ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್ ಬುಕ್ ಮಾಡಿದ ಬಳಿಕ ಮಹಿಳೆ ಚಾಲಕನನ್ನು ಅರ್ಧಗಂಟೆ ಕಾಯಿಸಿರುವ ಆರೋಪ ಕೇಳಿಬಂದಿದೆ.
ಚಾಲಕ ಹೇಳುವ ಪ್ರಕಾರ, ಮಹಿಳೆಗೆ ಮೂರು ಬಾರಿ ಕರೆ ಮಾಡಿದ್ದರೂ “ಬರುತ್ತಿದ್ದೇನೆ, ಬರುತ್ತಿದ್ದೇನೆ” ಎಂದು ಹೇಳಿ ಸುಮಾರು ಅರ್ಧಗಂಟೆ ಕಾಯಿಸಿದ್ದಾರಂತೆ.
ಇದಕ್ಕೆ ಪ್ರತಿಯಾಗಿ ಮಹಿಳೆ ಕೂಡ ಚಾಲಕನ ಮೇಲೆ ಆರೋಪ ಮಾಡಿದ್ದು, ಅರ್ಧಗಂಟೆ ಲೇಟ್ ಎಂದ ಕಾರಣಕ್ಕೆ “ನಿಮ್ಮ ಜೊತೆ ಪ್ರಯಾಣ ಮಾಡುವುದು ಸೇಫ್ ಅಲ್ಲ” ಎಂದು ಹೇಳಿದ್ದಾರೆ.
ಇಬ್ಬರೂ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಟಾಕ್ ವಾರ್ ನಡೆದಿದ್ದು, ಕ್ಯಾಬ್ ಕ್ಯಾನ್ಸಲ್ ಮಾಡದೇ ಅನಗತ್ಯವಾಗಿ ಕಾಯಿಸಿ ಕಿರಿಕ್ ಮಾಡಿದರೆಂದು ಚಾಲಕ ಆರೋಪಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿಯ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ!


















