ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.
ಸ್ವಾತಿ ಎಂಬ ಮಹಿಳೆ ನಿನ್ನೆ ರಾತ್ರಿ 9:30 ರ ಸುಮಾರಿಗೆ ಬೆಳ್ಳಂದೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಈ ವೇಳೆ ಸ್ಥಳೀಯರು ಎಚ್ಚೆತ್ತು112ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಮನವೊಲಿಕೆಗೆ ಮಾಡಲು ಯತ್ನಿಸಿದ್ದಾರೆ.
ಆದರೂ ಪೊಲೀಸರ ಮಾತು ಕೇಳದೆ ಕೆರೆಗೆ ಹಾರಲು ಮಹಿಳೆ ಮುಂದಾಗಿದ್ದಾಳೆ. ಕೊನೆಗೂ ಹರಸಾಹಸಪಟ್ಟು ಮಹಿಳೆಯನ್ನ ರಕ್ಷಸಿದ ಬೆಳ್ಳಂದೂರು ಪೊಲೀಸರು, ಸದ್ಯ ಮಹಿಳೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೈರತಿ ಬಸವರಾಜ್‌ಗೆ ಸಿಐಡಿ ಡ್ರಿಲ್ | ಸಂಕಷ್ಟ?



















