ರಾಮನಗರ: ರಸ್ತೆ ಮೇಲೆ ಜಲ್ಲಿಕಲ್ಲು ಹಾಕಿದ್ದಕ್ಕೆ ಮಹಿಳೆಯ ಮೇಲೆ ದರ್ಪ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ರಾಮನಗರದ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ಅಲ್ಲದೇ, ಮಹಿಳೆಯ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿ ಮನಬಂದಂತೆ ಥಳಿಸಲಾಗಿದೆ. ಮಹದೇವಮ್ಮ ಎಂಬುವವರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಕಿರಣ್ ಸಾಗರ್ ಎಂಬಾತ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯ ಮೇಲ್ಭಾಗದ ಕಟ್ಟಡಕ್ಕೆ ಮೋಲ್ಡ್ ಹಾಕಲು ಜಲ್ಲಿ ತರಿಸಿದ್ದ ಮಹದೇವಮ್ಮ, ತಮ್ಮ ಮನೆಯ ಮುಂದೆ ಜಲ್ಲಿ ಸುರಿಸಿದ್ದರು. ಇದರಿಂದಾಗಿ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತದೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಇಟ್ಟಿಗೆಯನ್ನು ಮನೆಯ ಮೇಲೆ ಎಸೆದಿದ್ದಾನೆ ಎನ್ನಲಾಗಿದೆ. ಈ ಕುರಿತು ರಾಮನಗರದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರಣ್ ಸಾಗರ್, ಹೇಮಾವತಿ, ಪ್ರಿಯಾಂಕಾ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.