ಬೆಂಗಳೂರು ಗ್ರಾಮಾಂತರ: ಅನೈತಿಕ ಸಂಬಂಧ ಬೇಡ ಎಂದು ಬ್ರೇಕ್ ಹಾಕಿದಕ್ಕೆ ಮಹಿಳೆಯೊಬ್ಬಳು ಗ್ಯಾಂಗ್ ಕಟ್ಟಿಕೊಂಡು ಬಂದು ಯುವಕನ ಮೇಲೆ ಲಾಂಗು ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಪುಟ್ಟಯ್ಯನ ಅಗ್ರಹಾರ ಗ್ರಾಮದ ಯುವಕ ಕಾರ್ತಿಕ್, ದೀಪ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಮನೆಯವರ ಬುದ್ದಿವಾದ ನಂತರ ಆಂಟಿ ಸಹವಾಸ ಬೇಡ ಎಂದು ಈ ಸಂಬಂಧವನ್ನುಬಿಟ್ಟಿದ್ದ. ಈ ಹಿನ್ನಲೆ ಕೋಪಗೊಂಡ ಮಹಿಳೆ ಕಳೆದ 13 ರ ಮುಸ್ಸಂಜೆ ಸಿನಿಮೀಯ ರೀತಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಕಾರಿನಲ್ಲಿ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ್ದಾಳೆ.
ಈ ವೇಳೆ ಸಾರ್ವಜನಿಕರು ತಿರುಗಿ ಬಿದ್ದಿದ್ದರಿಂದ ಹಲ್ಲೆ ಮಾಡುತ್ತಿದ್ದ ಕಿರಾತಕರು ಓಡಿ ಹೋಗಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೀಗ ಹಲ್ಲೆ ನಡೆಸಿ ಪರಾರಿ ಆಗಿದ್ದ ಖತರ್ನಾಕ್ ಆಂಟಿ ಹಾಗೂ ಮತ್ತೋರ್ವನನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ಭರ್ಜರಿಯಾಗಿ ಇಡ್ಲಿ, ದೋಸೆ ಸವಿದ ಸಿದ್ದರಾಮಯ್ಯ



















