ಬೆಂಗಳೂರು : ಬೆಂಗಳೂರಿನಲ್ಲಿ ಸಮಸ್ಯೆ ಅಂತ ಹೋದ ಮಹಿಳೆಗೆ ಕಾಫಿ ಟೀಯಲ್ಲಿ ಮದ್ದು ಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಬಳಿಕ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಬಿಟಿಎಂ ಲೇಔಟ್ ಮೂಲದ ಮಹಿಳೆಯಿಂದ ದೂರು ನೀಡಲಾಗಿದೆ. ಕೆಲ ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದ ಈಕೆ. ಶಾಲೆ ಮರಳಿ ತೆಗೆದುಕೊಳ್ಳುವ ವಿಚಾರಕ್ಕಾಗಿ ಯೂಟ್ಯೂಬ್ ವಾಹಿನಿಯ ಹನೀಫ್ ಎಂಬಾತನ ಸಂಪರ್ಕಿಸಿದ್ದಳು. ಶಾಲೆ ಮರಳಿ ಕೊಡಿಸುತ್ತೇನೆಂದು ಆಮಿಷ ತೋರಿಸಿ, ಕೇರಳದ ಗುರುಗಳ ಪರಿಚಯ ಇದೆ. ಅವರ ಬಳಿ ಮದ್ದು ಮಾಡಿಸಿಕೊಡುತ್ತೇನೆ ಕೆಲವು ಪೂಜೆಗಳನ್ನ ಹೇಳ್ತೀನಿ ಅವುಗಳನ್ನ ಮಾಡಿ ಎಂದು ಮನೆಗೆ ಹೋದಾಗಲೆಲ್ಲಾ ದೇವರ ಹೆಸರು ಹೇಳಿ ಆರೋಪಿ ಮದ್ದು ಹಾಕಿ ಕಾಫಿ ಟೀ ಕೊಡುತ್ತಿದ್ದನು. ಬಳಿಕ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.
ದೌರ್ಜನ್ಯ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಮದುವೆ ಮಾಡಿಕೊಂಡು ಮುಸ್ಲಿಂಗೆ ಕನ್ವರ್ಟ್ ಆಗುವಂತೆ ಒತ್ತಾಯಿಸಿದ್ದು, ಹೀಗೆ ಶಾಲೆ ವಾಪಸ್ ಕೊಡಿಸುವ ಹೆಸರಲ್ಲಿ 16 ಲಕ್ಷ ಹಣ ಪಡೆದು ವಂಚನೆ ಗೈದಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ.
ಹಣ ವಾಪಸ್ ಕೇಳಿದ್ದಕ್ಕೆ ಜಾತಿ ನಿಂದನೆ ಎಸಗಿದ ಆಸಾಮಿ. ಈ ಬಗ್ಗೆ ಬ್ಯಾಟರಾಯನಪುರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪೋಲಿಸರು ಎಫ್ಐಆರ್ ದಾಖಲಿಸಿ, ಕೇಸನ್ನು ಡಿಸಿಆರ್‌ಇ ಗೆ ವರ್ಗಾಯಿಸಿದ್ದು, ಆರೋಪಿ ಮೊಹಮ್ಮದ್ ಹನೀಫ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಬೇಕರಿ ಮಾಲೀಕರಿಗೆ ಪೊಲೀಸರಿಂದ ಕಿರುಕುಳ ಆರೋಪ | ಗೃಹ ಸಚಿವ ಪರಮೇಶ್ವರ್‌ಗೆ ಕಾಂಡಿಮೆಂಟ್ಸ್ ಸಂಘದಿಂದ ದೂರು


















