ಹೊಸದಿಲ್ಲಿ : ಭಾರತ ಮಹಿಳಾ ಖೋ ಖೋ ತಂಡ ಇಲ್ಲಿನಡೆಯುತ್ತಿರುವ ಖೋ ಖೋ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 175-18 ಅಂಕಗಳ ಭರ್ಜರಿ ಜಯ ದಾಖಲಿಸಿದೆ.
ಮಂಗಳವಾರ ರಾತ್ರಿ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿಅಸಾಧಾರಣ ಪ್ರದರ್ಶನ ಮತ್ತು ಗಮನಾರ್ಹ ರಕ್ಷ ಣಾತ್ಮಕ ತಂತ್ರಗಳೊಂದಿಗೆ ಮಹಿಳಾ ತಂಡವು ತನ್ನ ಪರಾಕ್ರಮವನ್ನು ಪ್ರದರ್ಶಿಸಿತು.
ಚೈತ್ರಾ ಬಿ, ಮೀರು ಮತ್ತು ನಾಯಕಿ ಪ್ರಿಯಾಂಕಾ ಇಂಗಳೆ ಸತತವಾಗಿ ಮಿಂಚುವ ಮೂಲಕ ಟೀಮ್ ಇಂಡಿಯಾಗೆ ಬಲ ತುಂಬಿದರು. ಮೊದಲ ಎರಡು ಬ್ಯಾಚ್‌ಗಳು ತಲಾ ಒಂದು ಪಾಯಿಂಟ್ ಗಳಿಸಿದವು. ಈ ಕಾರ್ಯತಂತ್ರದ ಆರಂಭವು ಮೊದಲ ತಿರುವಿನ ಕೊನೆಯಲ್ಲಿದಕ್ಷಿಣ ಕೊರಿಯಾ ಪಡೆಯಬಹುದಾದ 10 ಟಚ್ ಪಾಯಿಂಟ್‌ಗಳನ್ನು ತಟಸ್ಥಗೊಳಿಸಲು ನೆರವಾಯಿತು.
ತ್ವರಿತವಾಗಿ ಭಾರತೀಯರು ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದರು. ಕೇವಲ ತೊಂಬತ್ತು ಸೆಕೆಂಡುಗಳಲ್ಲಿ ನಸ್ರೀನ್ ಶೇಖ್, ಪ್ರಿಯಾಂಕಾ ಇಂಗಳೆ ಮತ್ತು ರೇಷ್ಮಾ ರಾಥೋಡ್ ಅವರನ್ನೊಳಗೊಂಡ ತಂಡವು ಡಿಫೆಂಡರ್‌ಗಳ ವಿರುದ್ಧ ಮೂರು ಆಲ್‌ಔಟ್ ಗೆಲುವುಗಳನ್ನು ಸಾಧಿಸಿತು. ಇದರೊಂದಿಗೆ ಅಂಕಗಳನ್ನು 24 ಕ್ಕೆ ಏರಿಸಿತು. ಕೇವಲ 18 ಸೆಕೆಂಡುಗಳ ನಂತರ, ಅವರು ದಕ್ಷಿಣ ಕೊರಿಯಾ ವಿರುದ್ಧ ನಾಲ್ಕನೇ ಆಲ್‌ಔಟ್ ಪಾಯಿಂಟ್ಸ್ ಗಿಟ್ಟಿಸಿದ ಭಾರತೀಯರು ತನ್ನ ಮುನ್ನಡೆಯನ್ನು 22 ಅಂಕಗಳಿಗೆ ವಿಸ್ತರಿಸಿದರು.
ರೇಷ್ಮಾ ರಾಥೋಡ್ ಆರು ಟಚ್ ಪಾಯಿಂಟ್‌ಗಳೊಂದಿಗೆ ಗಮನ ಸೆಳೆದರೆ, ಮಿನು 12 ಅಂಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಸ್ಕೋರ್‌ಅನ್ನು ಗಮನಾರ್ಹವಾಗಿ ಹೆಚ್ಚಿಸಿದರು. 2ನೇ ತಿರುವಿನ ವೇಳೆಗೆ ಟೀಮ್ ಇಂಡಿಯಾ 16 ಬ್ಯಾಚ್‌ಗಳನ್ನು ಹೊರಹಾಕಿ, ಅಂಕಗಳನ್ನು 94-10 ಕ್ಕೆ ಏರಿಸಿತು.
ಟರ್ನ್ 3ರಲ್ಲಿ ಅದೇ ತೀವ್ರತೆಯನ್ನು ಭಾರತೀಯರು ಕಾಯ್ದುಕೊಂಡರು. ಮಹಿಳಾ ತಂಡವು ಸೂಧಿರ್ತಿದಾಯಕ ಓಟದೊಂದಿಗೆ ಮೂರು ಅಂಕಗಳನ್ನು ಸೇರಿಸಿತು. ಟರ್ನ್ 3ರ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಕೊರಿಯಾ ಕೇವಲ ಎಂಟು ಅಂಕಗಳನ್ನು ಗಳಿಸಲು ಸಾಧ್ಯವಾಯಿತು, ಏಕೆಂದರೆ ಭಾರತದ ಪ್ರಾಬಲ್ಯವು ಅಡೆತಡೆಯಿಲ್ಲದೆ ಮುಂದುವರಿಯಿತು.
ಅಂತಿಮ ತಿರುವು ಪಂದ್ಯದ ಮೇಲೆ ಟೀಮ್ ಇಂಡಿಯಾದ ನಿರಂತರ ನಿಯಂತ್ರಣವನ್ನು ಪ್ರದರ್ಶಿಸಿತು. ಎದುರಾಳಿಗಳಿಗೆ ಯಾವುದೇ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಕೊರಿಯಾದ 18 ಅಂಕಗಳ ವಿರುದ್ಧ ಭಾರತ 175 ಅಂಕಗಳನ್ನು ಗಳಿಸುವುದರೊಂದಿಗೆ ಪಂದ್ಯವು ಕೊನೆಗೊಂಡಿತು. ಪಂದ್ಯಾವಳಿಯು ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದ್ದಂತೆ ತಮ್ಮ ಗುಂಪಿನಲ್ಲಿರುವ ಇತರ ತಂಡಗಳಿಗೆ ಅದ್ಭುತ ಸಂದೇಶವನ್ನು ಕಳುಹಿಸಿತು.