ವಿಂಗ್ ಕಮಾಂಡರ್ ನಿಂದ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವಿಕಾಸ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿದೆ. ಎಲ್ಲಾ ಕಡೇ ನನ್ನ ಬಗ್ಗೆ ನೋಡಿದ್ದೀರಿ. ಸೋಮವಾರ ಬೆಳಗ್ಗೆ ಬೈಯಪ್ಪನಹಳ್ಳಿ ಬಳಿ ಈ ಗಲಾಟೆ ನಡೆದಿದೆ. ನಾನು ಎಲ್ಲ ಕನ್ನಡ ಮಾಧ್ಯಮಗಳು, ಎಲ್ಲಾ ಕನ್ನಡ ಸಂಘಟನೆಗಳಿಗೆ ಧನ್ಯವಾದ ಹೇಳುತ್ತೇನೆ. ಬೈಯಪ್ಪನಹಳ್ಳಿ ಪೊಲೀಸರಿಗೆ ಧನ್ಯವಾದ, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ನನ್ನ ವರ್ಷನ್ ಸಹ ಅವರು ಕೇಳಿ, ನನ್ನ ಕಡೆಯಿಂದ ದೂರು ತೆಗೆದುಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿದಕ್ಕೆ ಧನ್ಯವಾದ.
ಈ ಘಟನೆಯಿಂದ ನನ್ನ ಕೆಲಸಕ್ಕೆ ಎಫೆಕ್ಟ್ ಆಗಿದೆ. ಕೆಲವು ವರ್ಷಗಳ ಹಿಂದೆ ನನ್ನ ತಂದೆ ಸಾವನ್ನಪ್ಪಿದರು. ನನ್ನ ತಾಯಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆದರೆ, ನಾನು ಈ ಕೇಸ್ ನ್ನು ಇಲ್ಲಿಗೆ ಬಿಡುವುದಿಲ್ಲ. ಕಮಿಷನರ್ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ, ಕೆಲಸಕ್ಕೆ ಎಫೆಕ್ಟ್ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ವಿಂಗ್ ಕಮಾಂಡರ್ ಕೇಸ್ ನಲ್ಲಿ ನನಗೆ ನ್ಯಾಯ ಸಿಗಬೇಕು. ಅದನ್ನು ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.