ಗದಗ ಜಿಲ್ಲೆಯ ಹಲವಡೆ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಜನ – ಜೀವನ ಅಸ್ತವ್ಯಸ್ಥವಾಗಿದೆ.
ವರುಣನ ರೌದ್ರಾವತಾರಕ್ಕೆ ರೋಣ ತಾಲೂಕಿನ ಯರೆಬೇಲೇರಿ ಗ್ರಾಮದಲ್ಲಿನ ಕೆಲ ಮನೆಗಳು ಹಾಗೂ ಶಾಲೆಯ ತಗಡಿನ ಶೀಟ್ ಗಳು ಹಾರಿ ಹೋಗಿದ್ದು ಮರಗಳು ಧರೆಗುರುಳಿವೆ.
ಅಲ್ಲದೇ, ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಯರೆಬೇಲೇರಿ ಗ್ರಾಮದ ಜನಜೀವನ ಅಸ್ತವ್ಯಸ್ಥವಾಗಿದೆ. ಜೋರಾದ ಗಾಳಿ ಬೀಸಿದರಿಂದ ತಗಡಿನ ಶೀಟುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.