ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್‌ಗೆ ಸಂಕಷ್ಟ ಎದುರಾಗುವುದು ನಿಶ್ಚಿತ ಎನ್ನಲಾಗಿದೆ.
ಈಗಾಗಲೇ ಸರ್ಕಾರ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಕಡ್ಡಾಯ ರಜೆಯ ಮೇಲೆ ರಾಮಚಂದ್ರ ರಾವ್ ತೆರಳಿದ್ದಾರೆ. ಸದ್ಯ ವಿಚಾರಣೆಯನ್ನು ರಾಮಚಂದ್ರ ರಾವ್ ಎದುರಿಸುತ್ತಿದ್ದು, ಮುಂದೆ ಸಂಕಷ್ಟ ನಿಶ್ಚಿತ ಎನ್ನಲಾಗಿದೆ.