ಬೆಂಗಳೂರು: ನಟ ದರ್ಶನ್ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಸಂಬಂಧ ಅಷ್ಟೊಂದು ಸರಿಯಿಲ್ಲ ಎಂದೇ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ದರ್ಶನ್, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಇನ್ ಸ್ಟಾ ಖಾತೆಯಿಂದ ಮಾಜಿ ಸಂಸದೆ ಸುಮಲತಾ ಸೇರಿದಂತೆ ಎಲ್ಲರನ್ನೂ ಅನ್ ಫಾಲೋ ಮಾಡಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ ಇಂದು ಸುಮಲತಾ ಮನೆಯಲ್ಲಿ ಕಾರ್ಯಕ್ರಮವಿದ್ದು, ದರ್ಶನ್ ಭಾಗಿಯಾಗಲಿದ್ದಾರಾ? ಎಂಬ ಚರ್ಚೆ ಶುರುವಾಗಿದೆ.
ಸುಮಲತಾ ಅಂಬರೀಶ್ ಮನೆಯಲ್ಲಿ ಮೊಮ್ಮಗನ ನಾಮಕರಣ ಮಹೋತ್ಸವ ನಡೆಯುತ್ತಿದೆ. ಸೊಸೆ ಅವಿವಾ ಬಿದಪ್ಪ ಕೆಲವು ತಿಂಗಳು ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ಆ ಮಗುವಿನ ನಾಮಕರಣ ಮಹೋತ್ಸವ ಇದೆ. ಖಾಸಗಿ ಹೋಟೆಲ್ ನಲ್ಲಿ ಮಗುವಿನ ನಾಮಕರಣ ಸಮಾರಂಭ ನಡೆಯುತ್ತಿದ್ದು, ಹಲವು ಗಣ್ಯರು ಆಗಮಿಸಲಿದ್ದಾರೆ. ನಟ ದರ್ಶನ್ ಸಹ ಆಗಮಿಸುವ ನಿರೀಕ್ಷೆ ಇದೆ.
ಅನ್ ಫಾಲೋ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗುತ್ತಿದ್ದಂತೆ ಮಾತನಾಡಿದ್ದ ಸುಮಲತಾ, ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ. ಈಗಲೂ ದರ್ಶನ್ ನನ್ನ ಮಗ ಎಂದಿದ್ದರು. ಆದರೆ, ಮನೆಯ ಸಂಭ್ರಮದಲ್ಲಿ ಮಗ ದರ್ಶನ್ ಭಾಗಿಯಾಗುವವರೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.