ಹಬ್ಬದ ಸಂದರ್ಭದಲ್ಲಿ ಇತ್ತೀಚೆಗೆ ಹಲವಾರು ಸಿನಿಮಾಗಳು ಬಿಡುಗಡೆಯಾಗಿದ್ದವು. ಹಲವು ಸಿನಿಮಾಗಳು ಜನರಿಗೆ ಇಷ್ಟವಾದರೆ, ಹಲವು ಸಿನಿಮಾಗಳನ್ನು ಇಷ್ಟವಾಗಿಲ್ಲ. ಆದರೆ, ಈ ವಾರ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರ ನ. 15ಕ್ಕೆ ತೆರೆಗೆ ಅಪ್ಪಳಿಸಲಿದೆ. ಈ ಮಧ್ಯೆ ತಮಿಳಿನಲ್ಲಿ ಸೂರ್ಯ ಅಭಿನಯದ ‘ಕಂಗುವ’ ನವೆಂಬರ್ 14ರಂದು ರಿಲೀಸ್ ಆಗುತ್ತಿದೆ. ಹೀಗಾಗಿ ಈ ಚಿತ್ರಗಳ ಮಧ್ಯೆ ಫೈಟ್ ಆಗಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಮಾಸ್ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಈ ಚಿತ್ರ. ಹೀಗಾಗಿ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಶಿವಣ್ಣ ಅವರು ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್ ಮೊದಲಾದವರು ನಟಿಸಿದ್ದಾರೆ. ‘
ಕಂಗುವ ಸಿನಿಮಾದಲ್ಲಿ ಸೂರ್ಯ ಅವರು ನಟಿಸಿದ್ದು, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ವಿಲನ್ ಪಾತ್ರ ಮಾಡಿದ್ದು, ದಿಶಾ ಪಟಾಣಿ ಚಿತ್ರದ ನಾಯಕಿಯಾಗಿದ್ದಾರೆ. ಶಿವ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ 2ಡಿ ಮಾತ್ರವಲ್ಲದೆ, 3ಡಿಯಲ್ಲೂ ಲಭ್ಯವಿದೆ. ಹೀಗಾಗಿ ಚಿತ್ರಗಳ ಮಧ್ಯೆ ಫೈಟ್ ಇದ್ದು, ಯಾವ ಚಿತ್ರ ಅಭಿಮಾನಿಗಳ ಮನಸ್ಸು ಗೆಲ್ಲಲಿದೆ ನೋಡಬೇಕಿದೆ.