ರಾಜಧಾನಿ ಬೆಂಗಳೂರು ಶೀಘ್ರವೇ ಐದು ಹೋಳಾಗಲಿದೆಯಾ? ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಯನ್ನು ಹೇಗೆ ವಿಂಗಡನೆ ಮಾಡಬೇಕು ಎನ್ನುವ ಕುರಿತು ನಿನ್ನೆ ಮಹತ್ವದ ಸಭೆ ನಡೆಸಲಾಗಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯನ್ನು ಹೇಗೆ ಮತ್ತು ಎಷ್ಟು ಭಾಗಗಳಾಗಿ ವಿಂಗಡಿಸಬೇಕು ಎನ್ನುವುದನ್ನು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಪಕ್ಷ ನಾಯಕರೊಟ್ಟಿಗೆ ಚರ್ಚಿಸಿ, ಅಂತಿಮ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತೆ ಅಂತಾ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಆಡಳಿತದ ದೃಷ್ಟಿಯಿಂದ ಬೆಂಗಳೂರನ್ನು 3ರ ಬದಲು ಐದು ಭಾಗವಾಗಿಸುವುದು ಒಳಿತು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಭವಿಷ್ಯದ 30ರಿಂದ 40 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಐದು ಭಾಗವಾಗಿಸಿದರೆ ಉತ್ತಮ ಎನ್ನುವ ಸಲಹೆ ವ್ಯಕ್ತವಾಗಿದೆ. ಈ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುಗುದು. ಆದಷ್ಟು ಬೇಗ ಚುನಾವಣೆಗಳು ನಡೆಯಬೇಕಿರುವುದರಿಂದ ವಿಂಗಡೆ ಪ್ರಕ್ರಿಯೆ ತ್ವರಿತವಾಗಿ ಒಂದು ರೂಪ ಪಡೆಯಲಿದೆ ಅಂತಾ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.