ಬೆಂಗಳೂರು: ಕಳೆದ ಮೂರು ದಿನಗಳಿಂದ ಆಟೋ ಗ್ಯಾಸ್ ಲಭ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕರಿಗೆ ಇಂದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಸಿಕ್ಕಿದೆ. ನಗರದ ಶೇಷಾದ್ರಿಪುರಂ ಬಳಿಯ ಟೋಟಲ್ ಗ್ಯಾಸ್ ಬಂಕ್ ಇಂದು ಬೆಳಗ್ಗೆಯಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಗ್ಯಾಸ್ ಸ್ಟಾಕ್ ಬಂದ ಹಿನ್ನೆಲೆಯಲ್ಲಿ ಬಂಕ್ ತೆರೆಯಲಾಗಿದ್ದು, ಬೆಳಗ್ಗೆಯೇ ಆಟೋ ಚಾಲಕರು ದೊಡ್ಡ ಸಂಖ್ಯೆಯಲ್ಲಿ ಬಂಕ್‌ಗೆ ಆಗಮಿಸಿದ್ದಾರೆ.
ಗ್ಯಾಸ್ ಕೊರತೆಯ ನಡುವೆಯೇ ಬಂಕ್ ಬಳಿ ಆಟೋ ಚಾಲಕರ ಸಂಧಣಿ ಕಂಡುಬಂದಿದೆ. ಇತ್ತ ಮೊದಲು 65 ರೂಪಾಯಿ ಇದ್ದ ಆಟೋ ಗ್ಯಾಸ್ ಬೆಲೆ ಈಗ 80 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಗ್ಯಾಸ್ ಅಭಾವದಿಂದ ತೊಂದರೆ ಅನುಭವಿಸಿದ್ದ ಆಟೋ ಚಾಲಕರಿಗೆ ಬಂಕ್ ಓಪನ್ ಆಗಿರುವುದು ತಾತ್ಕಾಲಿಕವಾಗಿ ನಿಟ್ಟುಸಿರು ತಂದಿದೆ. ಆದರೆ ಬೆಲೆ ಏರಿಕೆಯ ಬಗ್ಗೆ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಇತರ ಗ್ಯಾಸ್ ಬಂಕ್‌ಗಳಲ್ಲಿಯೂ ಸ್ಟಾಕ್ ಲಭ್ಯವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಅಸ್ಸಾಂನ 10ಕ್ಕೂ ಹೆಚ್ಚು ‘ಕೈ’ ಶಾಸಕರು ಬೆಂಗಳೂರಿಗೆ ಶಿಫ್ಟ್!



















