ಆನೇಕಲ್: ಇಲ್ಲಿನ ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ದಲ್ಲಿ ವನ್ಯ ಜೀವಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವಿರಾರು ಮಂದಿ ಪ್ರವಾಸಿಗರು (Tourists) ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜೈವಿಕ ಉದ್ಯಾನವನದ ಆಡಳಿತ ಹಳಿ ತಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾವಿರಕ್ಕೂ ಅಧಿಕ ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಸರಣಿ ಸಾವು ನಡೆದಿದೆ. ಕಳೆದ ಮೂರು ತಿಂಗಳಲ್ಲಿ ಹುಲಿ, ಚಿರತೆ, ಕರಡಿ ಸೇರಿದಂತೆ 20ಕ್ಕೂ ಅಧಿಕ ವನ್ಯಜೀವಿಗಳು ಸಾವನ್ನಪ್ಪಿವೆ.
ಸಮರ್ಪಕವಾದ ಪಾಲನೆ- ಪೋಷಣೆ ಇಲ್ಲದ ಕಾರಣಗಳು ವನ್ಯಜೀವಿಗಳು ಸಾವನ್ನಪ್ಪುತ್ತಿವೆ ಎನ್ನಲಾಗಿದೆ. ಎರಡು ಸಾವಿರ ಪ್ರಾಣಿಗಳ ಪೋಷಣೆಗೆ ಕನಿಷ್ಟ ನಾಲ್ವರು ನುರಿತ ವೈದ್ಯರು ಬೇಕು. ಕೇವಲ ಒಬ್ಬರೇ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಅವರೊಬ್ಬರೇ ಎಲ್ಲಾ ಪ್ರಾಣಿಗಳನ್ನು ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇರುವ ವೈದ್ಯರಿಂದ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಹುಲಿ, ಚಿರತೆ ಮತ್ತು ಕರಡಿ ಸಾವನ್ನಪ್ಪಿವೆ ಎಂದು ಪ್ರಾಣಿಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.