ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ದಾಳಿ ನಡೆದಿದ್ದು, ಬೆಳೆ ನಾಶವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ನಾಗಲಪುರದಲ್ಲಿ ಕಾಡಾನೆ ದಾಳಿ ನಡೆದಿದ್ದು, ಹಲಸು, ಪಪ್ಪಾಯಿ, ತೆಂಗಿನ ಮರ ನಾಶವಾಗಿವೆ. ರೈತ ಚಿಕ್ಕಸ್ವಾಮಿ ಎಂಬುವವರ ಜಮೀನಿಗೆ ನುಗ್ಗಿದ್ದ ಕಾಡಾನೆ ಬೆಳೆ ನಾಶ ಮಾಡಿದೆ. ಕಾಡಾನೆ ದಾಳಿಯಿಂದಾಗಿ ಲಕ್ಷಾಂತರ ರೂ. ನಷ್ಟ ಹೊಂದಿದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಡಾನೆ ಹಿಮ್ಮೆಟ್ಟಿಸುವಂತೆ ಮನವಿ ಮಾಡಿದ್ದಾರೆ.