ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡೆಮ್ಮೆ ಹಾವಳಿ ಮಿತಿ ಮೀರಿದೆ. ಸಕಲೇಶಪುರ ತಾಲ್ಲೂಕಿನ ಕಾಡೆಮ್ಮೆ ಹಿಂಡು ಕಲ್ಲಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಹಿಂಡು ಹಿಂಡಾಗಿ ಬೆಳೆ ನಾಶ ಮಾಡುತ್ತಿವೆ. ಅದಲ್ಲದೆ ಜನರ ಮೇಲೂ ದಾಳಿ ಮಾಡುತ್ತಿವೆ.
ಕಾಡೆಮ್ಮೆ ಹಾವಳಿಯಿಂದ ಒಂಟಿಯಾಗಿ ಓಡಾಡಲು ಜನರು ಭಯಭೀತರಾಗಿದ್ದಾರೆ. ಕಾಡೆಮ್ಮೆ ಹಾವಳಿ ತಡೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.