ನೊಯ್ಡಾ: ಯುವಕರೊಂದಿಗೆ ಚಾಟಿಂಗ್ ಮಾಡಬೇಡ ಎಂದು ಪತ್ನಿಗೆ ಪತಿ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನೋಯ್ಡಾದ ಸೆಕ್ಟರ್ -39 ಪ್ರದೇಶದ ಸದರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಂಡತಿಗೆ ಪತಿ ಇನ್‌ಸ್ಟಾಗ್ರಾಮ್ ಬಳಸುವುದನ್ನು ಬಿಡು ಎಂದು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಯ ಹಿಂದಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
9 ವರ್ಷಗಳ ಹಿಂದೆ ವಿಶಾಖಾ ಅವರನ್ನು ಓಂವೀರ್ ಮದುವೆಯಾಗಿದ್ದ. ಓಲಾ ಬೈಕ್ ಸವಾರನಾಗಿ ಕಾರ್ಯ ನಿರ್ವಹಿಸುತ್ತ ಆತ ಸಂಸಾರ ಸಾಗಿಸುತ್ತಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಓಂವೀರ್, ತನ್ನ ಹೆಂಡತಿ ವಿಶಾಖಾ ಆಗಾಗ ತನ್ನ ಮೊಬೈಲ್ ನಲ್ಲಿ ಇನ್‌ಸ್ಟಾಗ್ರಾಂ ಬಳಸುತ್ತಿದ್ದಳು. ಹಲವು ಹುಡುಗರೊಂದಿಗೆ ಚಾಟ್ ಮಾಡುತ್ತಿದ್ದಳು.
ಈ ಬಗ್ಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಹಲವು ಬಾರಿ ಜಗಳ ನಡೆದಿದ್ದವು. ಸೋಮವಾರ ಕೂಡ ಹೀಗೆ ಆಗಿತ್ತು. ನಾನು ಹೊರಗೆ ಹೋಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.