ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ಮದುವೆಯಾಗಿ 15 ದಿನಕ್ಕೆ ಹೆಂಡತಿಯು ಮನೆಯಲ್ಲಿದ್ದ ಒಡವೆ ಎತ್ತಿಕೊಂಡು ಗಂಡನ ಮನೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ನೇತ್ರ ಗಂಡನಿಗೆ ಕೈಕೊಟ್ಟು ಪರಾರಿಯಾದ ಪತ್ನಿ. ಆಂದ್ರದ ಮದನಪಲ್ಲಿ ಬಾಸ್ಕರ್ ಆಕೆಯ ಪತಿ. ಬ್ರೋಕರ್‌ಗಳನ್ನು ನಂಬಿ ಒಂದೇ ದಿನ ನೋಡಿ ವಿವಾಹವಾಗಿದ್ದ ಭಾಸ್ಕರ್,ಅರಿವಿಲ್ಲದೆ ವಿವಾಹಿತ ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.
ಈ ಜೋಡಿಗಳು ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಮಾವ ವೆಂಕಟರವಣರೆಡ್ಡಿ ಇದ್ದಾಗ ಪತಿ ಮದನಪಲ್ಲಿಗೆ ಹೋಗಿದ್ದನು. ಅಲ್ಲಿಂದ ಮರಳಿ ಬರುವಷ್ಟರಲ್ಲಿ ಹೆಂಡತಿ ಎಸ್ಕೇಪ್ ಆಗಿದ್ದಾಳೆ. ಈ ಘಟನೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ ; ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ!



















