ಉಡುಪಿ: ನಡುರಾತ್ರಿ ಕಟಪಾಡಿ ಜಂಕ್ಷನ್‌ನಲ್ಲಿ ಹಲ್ಲೆಗೊಳಗಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವತಿ ಹಾಗೂ ಬೊಬ್ಬಿಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಮಿಕನಾಗಿರುವ ಹಾವೇರಿ ಬ್ಯಾಡಗಿಯ ಹನುಮಂತ(38) ಕುಟುಂಬ ಸಮೇತನಾಗಿ ಕಟಪಾಡಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆತನು ಪತ್ನಿ ಶಿಲ್ಪಾ (34), ಪುತ್ರಿ ಬಿಂದು (18) ಮತ್ತು 80 ವರ್ಷದ ಅತ್ತೆ ಪ್ರೇಮಾ ಅವರ ಮೇಲೆ ಹಲ್ಲೆ ನೆಡೆಸಿದ್ದ, ಕಿರುಕುಳ ತಾಳಲಾರದೆ ರಸ್ತೆಗೆ ಓಡಿ ಬಂದಿದ್ದ ಮಹಿಳೆಯರು ದಿಕ್ಕುಗಾಣದಾಗಿದ್ದರು.
ಮಹಿಳೆಯರ ಆಕ್ರಂದನ ಆಲಿಸಿದ ಸ್ಥಳೀಯ ಅಯ್ಯಪ್ಪ ಭಕ್ತರು ಧಾವಿಸಿ ಬಂದು ಹೆಚ್ಚಿನ ತೊಂದರೆಯಾಗುವುದನ್ನು ತಪ್ಪಿಸಿದ್ದಲ್ಲದೆ ಆರೋಪಿ ರಸ್ತೆಗೆ ಬಂದು ಹಲ್ಲೆ ನಡೆಸುವುದನ್ನು ತಪ್ಪಿಸಿದ್ದಾರೆ. ಪುತ್ರಿಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಲ್ಲದೆ ಎದೆ, ಕೈ ಹಾಗೂ ಹೊಟ್ಟೆಗೆ ಒದ್ದ ಪರಿಣಾಮ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಮೂವರು ಮಹಿಳೆಯರನ್ನು ಮಂಗಳವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರೋಪಿ ಹನುಮಂತ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ತಿಂಥಣಿಯ ಕಾಗಿನೆಲೆ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ನಿಧನ | ಸಿಎಂ ಸಂತಾಪ



















