ಬೆಳಗಾವಿ: ಮದುವೆ ಆಗಿ 3 ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟಕ್ಕೆ ಸಿಟ್ಟಿಗೆದ್ದ ಪಾಪಿ ಗಂಡ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.
ರಾಜೇಶ್ವರಿ ಫಕೀರಪ್ಪ ಗಿಲಕ್ಕ (21) ಪತಿಯಿಂದ ಕೊಲೆಯಾದ ದುರ್ದೈವಿ. ಕೊಲೆಗೈದ ಬಳಿಕ ಪತ್ನಿ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ ಭೂಪ, ಸಂಬಂಧಿಕರೆಲ್ಲರಿಗೂ ಫೋನ್ ಮಾಡಿ ಹೇಳಿದ್ದಾನೆ ಎನ್ನಲಾಗುತ್ತಿದೆ.
ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತದೇಹ ನೋಡಿ ರಾಜೇಶ್ವರಿ ಕೊರಳಲ್ಲಿ ಮಾರ್ಕ್ ಮೂಡಿದ ಹಿನ್ನೆಲೆಯಲ್ಲಿ ಮಗಳ ಸಾವಿನನ ಬಗ್ಗೆ ಅನುಮಾನ ಬಂದು ತಕ್ಷಣವೇ ಬೈಲಹೊಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೋಷಕರ ದೂರಿ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂಬುದು ದೃಢವಾಗಿದೆ, ತಕ್ಷಣವೇ ಕೊಲೆಗಡುಕ ಫಕೀರಪ್ಪ ಗಿಲಕ್ಕನವರ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಕೊಲೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.
ಇದನ್ನೂ ಓದಿ; ನಾಳೆಯಿಂದ 4 ದಿನ ಬ್ಯಾಂಕ್ ಬಂದ್ | ಗ್ರಾಹಕರಿಗೆ ತಟ್ಟಲಿದೆಯೇ ಮುಷ್ಕರದ ಬಿಸಿ..!



















