ಬೆಂಗಳೂರು: ಪತ್ನಿಗೆ ಜಾತಿ ನಿಂದನೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ, ಪ್ರೇಯಸಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿಯೊಬ್ಬನನ್ನು ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆಡ್ರೆಲಾ ಜಬ್ ಆರೂಪ್ ಬಂಧಿತ ಟೆಕ್ಕಿ. ಕಳೆದ ಎರಡು ವರ್ಷಗಳಿಂದ ಪತ್ನಿಯೊಂದಿಗೆ ಬೆಂಗಳೂರಲ್ಲಿ ಆರೋಪಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಟೆಕ್ಕಿ ಆಗಿದ್ದ ಪತಿಗೆ ಕೆಲಸ ಇಲ್ಲದ್ದಕ್ಕೆ ಲಕ್ಷಾಂತರ ರೂ. ಬರುತ್ತಿದ್ದ ಕೆಲಸವನ್ನು ಪತ್ನಿ ಬಿಟ್ಟುಕೊಟ್ಟಿದ್ದರು.
ಒಂದು ಮಗುವಾದ ಬಳಿಕ ಪತ್ನಿಗೆ ಜಾತಿ ನಿಂದನೆ ಮಾಡಿ ಕಿರುಕುಳ ನೀಡಲು ಜಾಕೋಬ್ ಆರಂಭ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಪತ್ನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಹಲ್ಲೆ ನಡೆಸಿದ್ದ. ಕಿರುಕುಳ ತಾಳಲಾರದೇ ಪತಿ ವಿರುದ್ಧ ಪತ್ನಿ ಅಟ್ರಾಸಿಟಿ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ನಿ ಮಾಹಿತಿ ಆಧಾರದ ಮೇಲೆ ಪೊಲೀಸರು ಪ್ರೇಯಸಿ ಮನೆಗೆ ಹೋಗಿ ಜಾಕೂಬ್‌ನನ್ನು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಮೇಲೆ ಅಟ್ರಾಸಿಟಿ ಕೇಸ್‌ನಲ್ಲಿ ಬಂಧನಕ್ಕೆ ಒಳಗಾದ ಮೊದಲ ಕೇಸ್ ಇದಾಗಿದೆ.
ಇದನ್ನೂ ಓದಿ: ಜೈಲಿನಲ್ಲಿದ್ದ ಮಗನಿಗೆ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದಿ ತಾಯಿ!



















